ಬಂಡೀಪುರ ಸಮೀಪದ ಮಧುಮಲೈ ಅರಣ್ಯದಲ್ಲಿ ಆನೆಯ ಚಿತ್ರ ಬರೆಸಿರುವ ಫಲಕವನ್ನು ಕಾಡಾನೆ ಹೋಗಿ ವೀಕ್ಷಿಸಿದ ದೃಶ್ಯ. 
ಜಿಲ್ಲೆ

ಫಲಕ ಪರಿಶೀಲಿದ ಕಾಡಾನೆ

ಗುಂಡ್ಲುಪೇಟೆ: ರಸ್ತೆ ದಾಟುತ್ತಿದ್ದ ಕಾಡಾನೆಯೊಂದು ಅರಣ್ಯ ಇಲಾಖೆ ರಸ್ತೆಬದಿಯ ಫಲಕದಲ್ಲಿ ಬರೆಸಿರುವ ಆನೆಯ ಚಿತ್ರವನ್ನು ಕಂಡು ಅದರ ಸನಿಹಕ್ಕೆ ಹೋಗಿ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಂಡೀಪುರ ಸಮೀಪದ ಮಧುಮಲೈ ಅರಣ್ಯದಿಂದ ಹೊರಬಂದ ಕಾಡಾನೆಯೊಂದು

ರಸ್ತೆ ಬದಿ ತಮಿಳುನಾಡಿನ ಅರಣ್ಯ ಇಲಾಖೆ ಬರೆಸಿರುವ ಆನೆಯ ಚಿತ್ರವನ್ನು ಕಂಡು ಸಮೀಪಕ್ಕೆ ಹೋಗಿ ಪರಿಶೀಲಿಸುತ್ತಿದ್ದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.