ಜಿಲ್ಲೆ

ಫ.ಗು.ಹಳಕಟ್ಟಿ ಜಯಂತಿ 2ದು

ಕಲಬುರಗಿ: ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ೧೪೬ನೇ ಜನ್ಮದಿನದ ನಿಮಿತ್ತ ನಗರದ ಕನ್ನಡ ಭವನದಲ್ಲಿ ಜು.೨ರಂದು ಬೆಳಗ್ಗೆ ೧೧.೩೦ಕ್ಕೆ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ನಾಲ್ಕನೇ ವರ‍್ಷಿಕೋತ್ಸವ ಆಚರಿಸಲಾಗುವುದು ಎಂದು ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಆರ್​.ಸಿ.ಘಾಳೆ ತಿಳಿಸಿದರು.

ಜಯಂತಿ ನಿಮಿತ್ತ ಬೆಳಗ್ಗೆ ೯.೩೦ಕ್ಕೆ ನಗರದ ಜಗತ್​ ವೃತ್ತದಿಂದ ಎಸ್​ವಿಪಿ ವೃತ್ತದ ಮರ‍್ಗವಾಗಿ ಕನ್ನಡ ಭವನದವರೆಗೆ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಲಿದೆ. ಸಾಮಾಜಿಕ ಚಿಂತಕಿ ಜಾಹ್ನವಿ ಎಸ್​.ಮೋದಿ ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್​ ಉದ್ಘಾಟಿಸಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಶ್ರೀ ಲಿಂಗರಾಜ ಅಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಡಿವೈಎಸ್​ಪಿ ಆರ್​.ಸಿ.ಘಾಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಡಾ.ಬಸವ ಪಾಟೀಲ್​ ಜವಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಲ್ಲ ಕಾಯಕ ಶರಣರ ಸಂಟನೆಗಳು, ವಚನ ಸಾಹಿತ್ಯದ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ರವೀಂದ್ರ ಶಾಬಾದಿ, ಶರಣಪ್ಪ ಜೇನವೇರಿ, ವಿನೋದಕುಮಾರ ಜೇನವೇರಿ ಇತರರಿದ್ದರು.