ಅರಸೀಕೆರೆ: ಪ್ಲೋರೈಡ್ ಸಮಸ್ಯೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡ ಮೇಟಿಕುರ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೊಂಡಿಹಳ್ಳಿ ಹಾಗೂ ಹೊಸಕೆರೆ ಗ್ರಾಮಗಳ ಕೆರೆಗೆ ಹೇಮಾವತಿ ನದಿ ನೀರನ್ನು ಪೈಪ್ ಲೈನ್ ಮೂಲಕ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೊನ್ನವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿದ್ದರು.ಇನ್ನೆರಡು ಕೆರೆಗಳಿಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಅನುಮೋದನೆ ದೊರೆತಿತ್ತು. ಅದರ ಫಲವಾಗಿ ಇದೀಗ ನೀರು ಹರಿಯುತ್ತಿದೆ ಎಂದರು.ಪ್ಲೋರೈಡ್ ಸಮಸ್ಯೆ ನೀಗಿಸಲು 530 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ಅವರು ವಿವರಿಸಿದರು. .ಜಿ.ಪಂ ಮಾಜಿ ಸದಸ್ಯ ಮಾಡಾಳು ಸ್ವಾಮಿ, ಗ್ರಾಪಂ ಅಧ್ಯಕ್ಷರಾದ ಸರೋಜಮ್ಮ ,ಯೋಗೀಶ್ ಉಪಾಧ್ಯಕ್ಷ ಪ್ರಸನ್ನ, ನಿವೃತ್ತ ಇಂಜಿನಿಯರ್ ಶೇಖರಪ್ಪ, ಇಲಾಖೆಯ ಇಂಜಿನಿಯರ್‌ಗಳು ಇದ್ದರು.