ಯಲ್ಲಮ್ಮನಗುಡ್ಡದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಕಾರ್ಯಾಗಾರದಲ್ಲಿ ಜಾಗೃತಿ ಮೂಡಿಸಲಾಯಿತು, ಬಸವರಾಜ ಜಿರಗ್ಯಾಳ, ಅರವಿಂದ ಮಾಳಗೆ, ಎಸ್.ನಿತಿನ ಇತರರಿದ್ದರು. 
ಜಿಲ್ಲೆ

ಪ್ಲಾಸ್ಟಿಕ್‌ಮುಕ್ತ ಕ್ಷೇತ್ರವಾಗಿಸಲು ಶ್ರಮಿಸಿ

Belagavi

ಉಗರಗೋಳ, ಬೆಳಗಾವಿ: ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಉದ್ದೇಶ ಹಾಗೂ ಪ್ಲಾಸ್ಟಿಕ್‌ಮುಕ್ತ ಕ್ಷೇತ್ರವನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜಿರಗ್ಯಾಳ ಹೇಳಿದರು.

ಯಲ್ಲಮ್ಮನ ಗುಡ್ಡದಲ್ಲಿ ಹಿಂದು ಧಾರ್ವಿಕ ದತ್ತಿ ಇಲಾಖೆ ಬೆಂಗಳೂರು, ಯೋಜನಾ ನಿರ್ವಾಹಕ ಘಟಕ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯಿತಿ ಬೆಳಗಾವಿ ಮತ್ತು ಯಲ್ಲಮ್ಮನಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ಮುಕ್ತ ಕ್ಷೇತ್ರ ಎರಡು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇವಸ್ಥಾನದ ಪ್ರದೇಶದ ಎಲ್ಲೆಂದರಲ್ಲಿ ಕಸವನ್ನು ಬಿಸಾಡದಂತೆ ಜಾಗೃತಿ ಮೂಡಿಸಿ, ದೇವಸ್ಥಾನವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸಲು ಶ್ರಮಿಸಿ ಪ್ಲಾಸ್ಟಿಕ್ ಮುಕ್ತ ಕ್ಷೇತ್ರವನ್ನಾಗಿಸಲು ಸಹಕರಿಸಬೇಕು ಎಂದು ಕರೆ ನೀಡಿದರು. ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ ಮಾತನಾಡಿ ಯಲ್ಲಮ್ಮಡ್ಡದ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ಅಂತವರನ್ನು ಬಂಧಿಸಿ ದಂಡ ಹಾಕಲಾಗುವುದು ಎಂದರು.

ಬೆಂಗಳೂರಿನ ಎಸ್.ನಿತಿನ ಮಾತನಾಡಿ, ಸ್ಥಳೀಯ ಅಂಗಡಿ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂದಿರುವ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇದ್ದಲ್ಲಿ ಅಂತಹ ಅಂಗಡಿ ಲೈಸನ್ಸ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವೈ.ವೈ.ಕಾಳಪ್ಪನವರ, ಬೆಳಗಾವಿ ಸಾಯಿಮಂದಿರ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಸಾತಪ್ಪಗೋಳ, ಬಾಹುಬಲಿ ಮೇಳವಂಕಿ, ವಿಘ್ನೇಶ ಭಟ, ಅಭಿಯಂತರ ಎ.ವಿ.ಮೂಳ್ಳೂರ, ಎಸ್.ಎಲ್.ಯಲಿಗಾರ, ಎಂ.ಪಿ ದ್ಯಾಮನಗೌಡ, ಡಿ.ಆರ್.ಚವ್ಹಾಣ, ಬಸವರಾಜ ಪೊಲೇಶಿ, ಜಿ.ಎಂ.ಗಡೆಕರ, ರಂಜೀತ ಬಜಂತ್ರಿ, ಮಂಜು ಪವಾರ, ಮೌಳೇಶ ಸುಣಗಾರ, ಜಗದೀಶ ರೇವಣ್ಣವರ, ಹೇಮಾಂಬಿಕಾ, ಪ್ರತಿಭಾ, ಪ್ರಶಾಂತ ಹಾಗೂ ಇತರರಿದ್ದರು.