ಶಿರಾ: ತಾಲೂಕಿನ ಬುಕ್ಕಾಪಟ್ಟಣದಲ್ಲಿ ಇತ್ತೀಚಿಗೆ ಪಾನಿಪುರಿ ಸೇವಿಸಿದ 25 ಜನರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಶಿರಾ ನಗರಸಭೆ ಆಯುಕ್ತ ರುದ್ರೇಶ್ ಹಾಗೂ ಸಿಬ್ಬಂದಿ ಶುಕ್ರವಾರ ಸಂಜೆ ಹಾಗೂ ಶನಿವಾರ ಬೆಳಗ್ಗೆ ಅಂಗಡಿಗಳಿಗೆ ಭೇಟಿ ಪ್ಲಾಸ್ಟಿಕ್ ಲೋಟ, ತಟ್ಟೆ, ಎಲೆ ಹಾಗೂ ಕ್ಯಾರಿ ಬ್ಯಾಗ್ಗಳನ್ನು ಜಪ್ತಿ ಮಾಡಿ, ಪ್ಲಾಸ್ಟಿಕ್
ಸಾಮಗ್ರಿಗಳನ್ನು ಮಾರದಂತೆ ಅರಿವು ಮೂಡಿಸಿದರು.
ತದನಂತರ ನಗರದ ಪ್ರಮುಖ ರಸ್ತೆಯಲ್ಲಿ ಬೀದಿಬದಿಯ ಹೋಟೆಲ್ಗಳಿಗೆ ಭೇಟಿ ನೀಡಿ ಅಲ್ಲಿ ಉಪಯೋಗಿಸುವ ಅಡುಗೆ ಎಣ್ಣೆಯ ಗುಣಮಟ್ಟ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮಾಡುವ ಬಗೆ, ಆಹಾರ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು. ವಿಷಕಾರಿ ಟೇಸ್ಟಿಂಗ್ ಪೌಡರ್, ಅಪಾಯಕಾರಿ ಬಣ್ಣ, ಕರಿದ ಎಣ್ಣೆಯನ್ನು ಮರುಬಳಿಕೆ ಮಾಡಿ ಉಪಯೋಗಿಸುತ್ತಿದ್ದ ಹೋಟೆಲ್ ನವರಿಗೆ ಕಡೆಯ ಎಚ್ಚರಿಕೆ ನೀಡಿದರು. ಆಹಾರ ನೀಡಲು ಮತ್ತು ಪಾರ್ಸಲ್ ಮಾಡಲು ಬಳಸುತ್ತಿರುವ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಸಾರ್ವಜನಿಕರಿಗೆ ಆಹಾರ ನೀಡುವ ಸಂದರ್ಭದಲ್ಲಿ ಬಾಳೆ ಎಲೆ ಬಳಸಿ ಎಂದು ತಿಳಿಸಿದರು. ಜಪ್ತಿ ಕಾರ್ಯಚರಣೆ ಸಂದರ್ಭದಲ್ಲಿ ಮೊದಲು ಫ್ಯಾಕ್ಟರಿಗಳಲ್ಲಿ ಪ್ಲಾಸ್ಟಿಕ್ ಐಟಂಗಳನ್ನು ತಯಾರು ಮಾಡುವುದನ್ನು ನಿಲ್ಲಿಸಿ, ಇಲ್ಲಿಗೆ ಬಂದು ಪ್ಲಾಸ್ಟಿಕ್ ಜಪ್ತಿ ಮಾಡಿ ಹೋಟೆಲ್ನವರಿಗೆ ತೊಂದರೆ ಕೊಡುತ್ತಿದ್ದೀರಾ ಎಂದು ಅಧಿಕಾರಿಗಳೊಂದಿಗೆ ಕೆಲವರು ವಾಗ್ವಾದಕ್ಕೆ ನಡೆಸಿದರು. ಕಿರಿಯ ಆರೋಗ್ಯ ಸಹಾಯಕರಾದ ಜಗನ್ನಾಥ್, ಶ್ರೀಕಾಂತ್, ಪೌರಕಾರ್ಮಿಕರ ಗಜೇಂದ್ರ, ಮಣಿಕಂಠ, ಶಿವರಾಜು, ರಂಗರಾಜು ಇದ್ದರು.