ಬೀದರ್: ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ಮುಂದುವರೆಸಿ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ಚುರುಕು ಮುಟ್ಟಿಸುತ್ತಿದ್ದಾರೆ.
ಗುರುವಾರ ಮತ್ತು ಶುಕ್ರವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳ ಮೇಲೆ 6150 ರೂ. ದಂಡಿ ವಿಧಿಸಿದರು.
ಗುರುವಾರ ಅಂಬೇಡ್ಕರ್ ವೃತ್ತ ಮತ್ತು ಶಹಗಂಜ್ ಕಮಾನ್ ಬಳಿಯ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 2200 ರೂ. ದಂಡ ಹಾಗೂ ಶುಕ್ರವಾರ ನಗರದ ಅಂಬೇಡ್ಕರ ವೃತ್ತದಿಂದ ಬ್ರಿಮ್ಸ್ ಆಸ್ಪತ್ರೆಯವರೆಗಿನ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 3950 ರೂ.ದಂಡ ವಿಧಿಸಿದರು. ದಾಳಿಯಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕರಾದ ಸುಭಾಷ, ನಾಗೇಶ, ಗಿರೀಶ, ವಿನೋದ, ಹಪೀಜ್ ಹಾಗೂ ಪರಿಸರ ಅಭಿಯಂತರ ರವೀಂದ್ರ ಕಾಂಬ್ಳೆ ಇದ್ದರು.