ಆಲ್ದೂರು ಸಮೀಪದ ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾ ಆವರಣದಲ್ಲಿ ತೆಂಗಿನ ಗಿಡ ನೆಡಲಾಯಿತು. ಮುಖ್ಯಶಿಕ್ಷಕ ಪಿ.ಮಂಜಪ್ಪ, ಕೆ.ಎಚ್.ಗೀತಾ ಇತರರಿದ್ದರು.  
ಜಿಲ್ಲೆ

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ

ಆಲ್ದೂರು: ಯಲಗುಡಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ತೆಂಗಿನ ಸಸಿಗಳು ಹಾಗೂ ಶಾಲಾ ಕೈತೋಟದಲ್ಲಿ ವಿವಿಧ ರೀತಿಯ ಹೂ ಗಿಡಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.

ಮುಖ್ಯಶಿಕ್ಷಕ ಪಿ.ಮಂಜಪ್ಪ ಮಾತನಾಡಿ, ಪರಿಸರವೆಂದರೆ ಗಾಳಿ, ನೀರು, ಬೆಟ್ಟ , ಗುಡ್ಡ , ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಆಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಅವಶ್ಯಕತೆ ಇದೆ ಎಂದರು. ಶಾಲೆಗೆ ತೆಂಗಿನ ಸಸಿಗಳನ್ನು ಕೊಡುಗೆಯಾಗಿ ನೀಡಿದ ಶಾಲಾ ಶಿಕ್ಷಕಿ ಕೆ.ಎಚ್.ಗೀತಾ ಮಾತನಾಡಿ, ಬಿಸಿಯೂಟದ ಉಪಯೋಗಕ್ಕಾಗಿ ತೆಂಗಿನ ಗಿಡ ಬೆಳೆಸಲಾಗಿದೆ ಎಂದು ಹೇಳಿದರು. ಶಿಕ್ಷಕರು , ಮಕ್ಕಳು, ಎಸ್‌ಡಿಎಂಸಿ ಸದಸ್ಯರು ಇದ್ದರು.