ವಿಜಯವಾಣಿ ಸುದ್ದಿಜಾಲ ಗದಗ
ಪಠ್ಯದೊಂದಿಗೆ ಪಠ್ಯೇತರ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೋಳ್ಳಬೇಕು ಎಂದು ಗದಗ ಡಯಟ್ ಉಪನಿರ್ದೆಶಕ ಜಿ.ಎಲ್.ಬಾರಾಟಕ್ಕೆ ಅಭಿಪ್ರಾಯಪಟ್ಟರು.
ನಗರದ ಕನಕ ಭವನದಲ್ಲಿ ಸೋಮವಾರ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೆಶನಾಲಯ ಆಶ್ರಯದಲ್ಲಿ ಜರುಗಿದ 2023 - 24ನೇ ಸಾಲಿನ ಪ್ರೌಢಶಾಲಾ ವಿದ್ಯಾಥಿರ್ಗಳ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಈ ಸೌಲಭ್ಯ ಮತ್ತು ಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ವೈಯುಕ್ತಿಕ ಹಾಗೂ ಸಾಮಾಜಿಕ ಸಾಧನೆಗೆ ವಿಜ್ಞಾನವನ್ನು ಉಪಯೋಗಿಸಿಕೊಂಡು ವಿದ್ಯಾಥಿರ್ಗಳು ಸೈಣಿಕವಾಗಿ ಉನ್ನತ ಸ್ಥಾನ ಪಡೆಯಬೇಕೆಂದು ತಿಳಿಸಿದರು.
ವಿಜ್ಞಾನದ ತಳಹದಿಯ ಮೇಲೆ ನಾಟಕ ಪ್ರದರ್ಶನ ಮಾಡುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಪರಿಕಲ್ಪನೆಯುಳ್ಳ ವಿಜ್ಞಾನ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಂಡು ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಗೆ ಸಂದೇಶ ರವಾನೆಯಾಗಲಿ ಎಂದು ಬಾರಾಟಕ್ಕೆ ತಿಳಿಸಿದರು.
ಶಹರ ೇತ್ರ ಶಿಣಾಧಿಕಾರಿ ಆರ್.ಎಸ್.ಬುರಡಿ ಮಾತನಾಡಿ ವಿಜ್ಞಾನದ ಮೂಲಕ ಜಾಗೃತಿ, ಮಾಹಿತಿ ಹಂಚುವಿಕೆ, ವಿಜ್ಞಾನದ ಸಾಧನೆಯನ್ನು ರಂಗಸಜ್ಜಿಕೆಯಲ್ಲಿ ಅಭಿವ್ಯಕ್ತಗೊಳಿಸಲು ಹೊರಟಿರುವ ವಿದ್ಯಾಥಿರ್ಗಳ ಸಾಹಸದ ಪ್ರಯತ್ನವನ್ನು ಅಭಿನಂದಿಸಬೇಕು. ಪರಿಸರ ಕಾಳಜಿ, ನೈಸಗಿರ್ಕ ಸಂಪನ್ಮೂಲಗಳ ಕ್ರೂಢಿಕರಣ ಮತ್ತು ಸದ್ಭಳಕೆ ಆಗುವಂತೆ ತಿಳುವಳಿಕೆ ನೀಡುವ ಯತ್ನ ನಾಟಕ ರೂಪದಲ್ಲಿ ನಡೆದಿದೆ ಎಂದರು.
ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂದ ಅಧ್ಯ ಪಿ.ಎಚ್. ಕಡಿವಾಲ ಮಾತನಾಡಿ, ರಂಗಭೂಮಿಗೆ ಹೆಸರಾಗಿರುವ ನಗರದಲ್ಲಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಏರ್ಪಡಿಸಿರುವದು ಅಭಿನಂದನೀಯ. ವಿದ್ಯಾಥಿರ್ಗಳಲ್ಲಿ ವಿಜ್ಞಾನ ವಿಷಯವನ್ನು ಮನನ ಮಾಡಿಕೊಳ್ಳುವ ಹಾಗೂ ಅಭಿನಯ ಕಲೆಯನ್ನು ಕರಗತ ಮಾಡಿಕೊಳ್ಳಲು ಇದೊಂದು ವೇದಿಕೆಯಾಗಿದೆ. ಕಲಿಕಾ ಕಲೆಯನ್ನು, ಜ್ಞಾನದ ದಿಗಂತವನ್ನು ಹೆಚ್ಚಿಸಲು ಇಂತಹ ಸ್ಪರ್ಧೆಗಳು ನಡೆಯಬೇಕು ಎಂದರು.
ಗ್ರಾಮೀಣ ಟಕದ ಅಧ್ಯ ಬಿ.ಎ್.ಪೂಜಾರ, ಮಂಗಲಾ ತಾಪಸ್ಕರ್, ಎಚ್. ಬಿ. ರಡ್ಡೇರ, ಗಾಯತ್ರಿ ಸಜ್ಜನ, ಎಂ. ಎಂ. ಕರ್ಜಗಿ, ಜಿ. ಡಿ. ದಾಸರ, ಬಿ. ಎಂ. ಶಿವಪೂರ, ಕೆ. ಎಸ್. ಹೂಲಗೇರಿ, ಶಂಕರ ಹಡಗಲಿ ಎಸ್.ಐ.ದಿಂಡೂರ ಹಲವರು ಇದ್ದರು.
ಬಾಕ್ಸ್:
ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಶಿರಸಿ, ಕುಮಟಾ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಯಿಂದ ತಲಾ ಒಂದು ತಂಡಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಶಿರಸಿ ಜಿಲ್ಲೆಯ ಬೈರುಂಬೆಯ ಶಾರದಾಂಬಾ ಆಂಗ್ಲ ಮಾದ್ಯಮ ಪ್ರೌಢ ಶಾಲೆ ಪ್ರಥಮ, ಬೆಳಗಾವಿಯ ಸ್ವಾಧ್ಯಾಯ ವಿದ್ಯಾ ಮಂದಿರದ ಪ್ರೌಢ ಶಾಲೆಯು ದ್ವೀತಿಯ ಹಾಗೂ ಗದಗ ಜಿಲ್ಲೆಯ ನೀರಲಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯು ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು.