ಜಿಲ್ಲೆ

ಪ್ರೌಢ ಶಾಲಾ ಶಿಕ್ಷಣ ಒಂದು ಅಡಿಗಲ್ಲು

ಮೈಸೂರು: ವಿದ್ಯಾರ್ಥಿಗಳ ಜೀವನದಲ್ಲಿ ಪ್ರೌಢ ಶಾಲಾ ಶಿಕ್ಷಣ ಒಂದು ಅಡಿಗಲ್ಲು. ಈ ಅವಧಿಯಲ್ಲಿ ಓದಿನ ಕಡೆ ಹೆಚ್ಚು ಗಮನವಹಿಸಬೇಕು. ಉನ್ನತ ಮಟ್ಟದಲ್ಲಿ ಫಲಿತಾಂಶ ಪಡೆಯಲು ಶ್ರಮಿಸಬೇಕು ಇದರಿಂದ ಮುಂದಿನ ಶಿಕ್ಷಣಕ್ಕೆ ದಾರಿ ದೀಪವಾಗುತ್ತದೆ ಎಂದು ಸರಸ್ವತಿಪುರಂನ ಜೆಎಸ್‌ಎಸ್ ಬಾಲಿಕಾ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿ.ಪಿ.ನಿರ್ಮಲಾ ಹೇಳಿದರು.
ಶಾಲೆೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲೆ ಪುನಾರಾಂಭದ ಅಂಗವಾಗಿ ವಿದ್ಯಾರ್ಥಿಗಳ ಸಿಹಿ ನೀಡಿ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಮಟ್ಟದಲ್ಲಿ ಕಲಿತಿದ್ದು, ಕೊನೆಯ ವರೆವಿಗೂ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ ಶ್ರದ್ಧೆಯಿಂದ ಎಲ್ಲರೂ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಯಾದ ಸೆಸ್ಕ್ ಉದ್ಯೋಗಿ ಕೆ.ಎಸ್.ಆನಂದ ಅವರು ಶಾಲೆ ಕಚೇರಿ ಉಪಯೋಗಕ್ಕಾಗಿ ಕಲ್ಲರ್ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದರು.