ಜಿಲ್ಲೆ

ಪ್ರೋತ್ಸಾಹ ಧನಕ್ಕೆ ಅರ್ಜಿ

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ನಿಧಿಯಡಿ ಪ್ರೋತ್ಸಾಹ ಹಾಗೂ ಸಹಾಯ ಧನಕ್ಕೆ ಡಿ. 7ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಅಂಗವಿಕಲರು, ಪೋಲಿಯೋಗೆ ತುತ್ತಾದವರಿಗೆ ಕೃತಕ ಪಾದ ಮತ್ತಿತರ ಅಂಗಾಂಗಗಳ ಜೋಡಣೆಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿ ವಿಷಯ ನಿರ್ವಾಹಕರು ಅಥವಾ www.chitradurgacity.mrc.gov.in  ಯಿಂದ ಮಾಹಿತಿ ಪಡೆಯಬಹುದೆಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.