ಹಿರೀಸಾವೆ ಹೋಬಳಿ ಬೆಳಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಪ್ರೇಮಾಕುಮಾರಿ ಅನಂತರಾಮ್ ಹಾಗೂ ಆಶಾ ಸುಧಾಕರ್ ಅವರನ್ನು ಅಭಿನಂದಿಸಲಾಯಿತು. ಎಚ್.ಜಿ.ರಾಮಕೃಷ್ಣ, ಮಹೇಶ್, ಜಯರಾಮ್, ರಂಗೇಗೌಡ, ಪುಟ್ಟಸ್ವಾಮಿ, ವಿವೇಕ್, ಗೋಪಿ, ಇದ್ದರು. 
ಜಿಲ್ಲೆ

ಪ್ರೇಮಾಕುಮಾರಿ, ಆಶಾ ಅವಿರೋಧ ಆಯ್ಕೆ

ಹಿರೀಸಾವೆ: ಹೋಬಳಿಯ ಬೆಳಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪ್ರೇಮಾಕುಮಾರಿ ಅನಂತರಾಮ್, ಉಪಾಧ್ಯಕ್ಷರಾಗಿ ಆಶಾ ಸುಧಾಕರ್ ಅವಿರೋಧ ಆಯ್ಕೆಯಾದರು.

ಇತ್ತೀಚೆಗೆ ಗ್ರಾಪಂನಲ್ಲಿ ಚುನಾವಣೆ ಪ್ರಕ್ರಿಯೆ ಜರುಗಿತು. 12 ಜನ ಸದಸ್ಯರ ಬಲ ಹೊಂದಿರುವ ಗ್ರಾಪಂನಲ್ಲಿ 8 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪ್ರೇಮಾಕುಮಾರಿ ಅನಂತರಾಮ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಶಾ ಸುಧಾಕರ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.

ಚುನಾವಣಾ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಕಾರ್ಯನಿರ್ವಹಿಸಿದರು. ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು. ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಪಂ ಸದಸ್ಯರಾದ ವಿವೇಕ್, ಶ್ವೇತಾ, ವಿಶ್ವನಾಥ್, ಮಹಾಲಕ್ಷ್ಮೀ ಗೋಪಿ, ಕೃಷ್ಣ, ಪ್ರಮುಖರಾದ ಮಹೇಶ್, ನಂಜಪ್ಪ, ರಂಗೇಗೌಡ, ಕೆ.ಪುಟ್ಟಸ್ವಾಮಿ, ಜಯರಾಮ್, ಚೇತನ್‌ಗೌಡ ಹಾಜರಿದ್ದರು.