ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಕೆಎಸ್‌ಆರ್‌ಟಿಸಿ ವತಿಯಿಂದ ಈ ಸಲವೂ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸೆ.27ರಿಂದ ಅಕ್ಟೋಬರ್ 7ರವರೆಗೆ ಪ್ಯಾಕೇಜ್ ಟೂರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಟೂರ್ಸ್ ವಿವರ:
ಗಿರಿ ದರ್ಶಿನಿ ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು: ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟ. ನಿರ್ಗಮನ-ಬೆಳಗ್ಗೆ 6.30, 325 ಕಿ.ಮೀ, ಪ್ರಮಾಣ ದರ ದೊಡ್ಡವರಿಗೆ 450 ರೂ. ಮಕ್ಕಳಿಗೆ 300 ರೂ., ನಿರ್ಗಮನದ ಸ್ಥಳ ಮೈಸೂರು ಕೇಂದ್ರೀಯ ಬಸ್ ನಿಲ್ದಾಣ.
ಜಲದರ್ಶಿನಿ ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ, ನಿಸರ್ಗಧಾಮ, ಅಬ್ಬಿ ಜಲಪಾತ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್‌ಎಸ್. ನಿರ್ಗಮನ ಬೆಳಗ್ಗೆ 6.30., ಪ್ರಮಾಣ ದರ: ದೊಡ್ಡವರಿಗೆ 500 ರೂ., ಮಕ್ಕಳಿಗೆ 350 ರೂ., ನಿರ್ಗಮನದ ಸ್ಥಳ-ಮೈಸೂರು ಕೇಂದ್ರೀಯ ಬಸ್ ನಿಲ್ದಾಣ.
ದೇವ ದರ್ಶಿನಿ ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು: ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್. ನಿರ್ಗಮನ ಬೆಳಗ್ಗೆ 6.30., ಪ್ರಮಾಣ ದರ: ದೊಡ್ಡವರಿಗೆ 330ರೂ., ಮಕ್ಕಳಿಗೆ 225ರೂ. ನಿರ್ಗಮನದ ಸ್ಥಳ: ಮೈಸೂರು ಕೇಂದ್ರೀಯ ಬಸ್ ನಿಲ್ದಾಣ.
ಟೂರ್ ಪ್ಯಾಕೇಜ್‌ಗಳಿಗೆ ಪ್ರವಾಸಿಗರಿಗೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಿಗಮದ ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಖಾಸಗಿ ಅವತಾರ್ ಬುಕ್ಕಿಂಗ್ ಕೌಂಟರ್ ಹಾಗೂ ಆನ್‌ಲೈನ್ ksrtc.karnataka.gov.in ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.