ಜಿಲ್ಲೆ

ಪ್ರೇಕ್ಷಕರ ರಂಜಿಸಿದ ಮಿಸ್ ಬೆಳಗಾವಿ

ಬೆಳಗಾವಿ: ರೋಟರಿ ಕ್ಲಬ್ ಆಯೋಜಿಸಿದ್ದ ಅನ್ನೋತ್ಸವದಲ್ಲಿ ಮಂಗಳವಾರ ನಡೆದ ಮಿಸ್ ಬೆಳಗಾವಿ-2025ರ ಗ್ರ್ಯಾಂಡ್ ಫಿನಾಲೆ ಪ್ರೇಕ್ಷಕರನ್ನು ರಂಜಿಸಿತು. ಪ್ರಶ್ನೋತ್ತರ ಸುತ್ತಿನಲ್ಲಿ ಸೌಂದರ್ಯ, ಆತ್ಮವಿಶ್ವಾಸ ಮತ್ತು ಅತ್ಯುತ್ತಮ ಪ್ರತಿಕ್ರಿಯೆಗಳಿಂದ ತೀರ್ಪುಗಾರರನ್ನು ಮೆಚ್ಚಿಸಿದ ವೃಂದಾ ರಾಣಾ ಪ್ರಶಸ್ತಿ ನೀಡಲಾಯಿತು.

ಮೊದಲ ರನ್ನರ್‌ಅಪ್ ವರ್ಷಾ ಆರ್.ಎಸ್ ಮತ್ತು ಎರಡನೇ ರನ್ನರ್ ಅಪ್ ಪ್ರಿಯಾಂಕಾ ಕೋಕರೆ-ಉನ್ನತ ತಾಳ್ಮೆ ಮತ್ತು ಪ್ರತಿಭೆ ತೋರಿದರು.

ಈ ಸ್ಪರ್ಧೆಯಲ್ಲಿ ಅನುರಾಧಾ ಗಾರ್ಗ್‌ಗೆ ಮಿಸ್ಟ್ರೆಸ್ಸ್ ಇಂಡಿಯಾ ಗ್ಲೋಬ್, ವೈಷ್ಣವಿ ಗುಂಡಲೂರಗೆ ಮಿಸ್ ಕ್ಯಾಟ್‌ವಾಕ್ ಕ್ವೀನ್, ದೀಪ್ತಿ ಜಾನುಗೆ ಮಿಸ್ ಕಾನ್ಜೆನಿಯಾಲಿಟಿ, ಸಹಾನಾ ತಿರಾಕಿಗೆ ಮಿಸ್ ಟ್ಯಾಲೆಂಟೆಡ್ ಜ್ಯುವೆಲ್, ತಿಶಾ ಅನ್ವೇಕರ್‌ಗೆ ಮಿಸ್ ಮೋಸ್ಟ್ ಫೋಟೋಜೆನಿಕ್, ಶ್ರೀಸಾಕ್ಷಿ ಗಚ್ಚಿಗೆ ಮಿಸ್ ಡ್ಯಾಜ್ಲಿಂಗ್ ಸ್ಮೈಲ್ಗೆ ಪ್ರಶಸ್ತಿ ನೀಡಲಾಯಿತು.

ಬೀಯಿಂಗ್ ಹ್ಯೂಮನ್ ಮಾರ್ಕೆಟಿಂಗ್ ಮುಖ್ಯಸ್ಥ ಉತ್ಸಾ ರಾಯ್, ನಟಿ ಮತ್ತು ಭರತನಾಟ್ಯ ನೃತ್ಯಗಾರ್ತಿ ಫಾಲಗುಣಿ ಖನ್ನಾ, ಫ್ಯಾಷನ್ ಮತ್ತು ಮಾಡೆಲಿಂಗ್ ನಿಧಿ ಕೊಸಂದಲ್ ಇದ್ದರು. ಬೀಯಿಂಗ್ ಹ್ಯೂಮನ್ ಕ್ಲೋಥಿಂಗ್ ಮತ್ತು ಅದರ ಫ್ರಾಂಚೈಸಿ ಪಾಲುದಾರರಾದ ಯೋಗೇಶ್ ಕುಲಕರ್ಣಿ ಮತ್ತು ಪ್ರಿಯಾಂಕಾ ಕುಲಕರ್ಣಿ ಕಾರ್ಯಕ್ರಮ ಪ್ರಾಯೋಜಿಸಿದ್ದಾರೆ.