ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿ
|ಮನನೊಂದು ತಂದೆಯಿಂದ ತಿಥಿ ಕಾರ್ಯ
ಚಿಕ್ಕೋಡಿ: ಪ್ರೀತಿಸಿದ ಯುವಕನೊಂದಿಗೆ ಮಗಳು ಪರಾರಿಯಾದ ಘಟನೆಯಿಂದ ಮನನೊಂದ ತಂದೆ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈಚೆಗೆ ನಡೆದಿದೆ.
ನಾಗರಾಳ ಗ್ರಾಮದ ನಿವಾಸಿ ಸುಶ್ಮಿತಾ ಶಿವಗೌಡ ಪಾಟೀಲ (೨೯) ಪ್ರಿಯಕರನೊಂದಿಗೆ ಪರಾರಿಯಾದ ಯುವತಿ.ಇವಳು ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ವಿಠ್ಠಲ ಬಸ್ತವಾಡ ತಹಶಿಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದ.ಮಗಳು ಮನೆ ಬಿಟ್ಟು ಹೋದ ಹಿನ್ನಲೆ ಮನನೊಂದ ಶಿವಗೌಡ ಪಾಟೀಲ ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿ ಸಂಬಂಧವನ್ನು ಕತ್ತರಿಸಿ ಕೊಂಡಿದ್ದಾನ್ನೆ.ಬಳಿಕ ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭೋಜನ ಹಾಕಿಸಿ ತಿಥಿ ಕಾರ್ಯವನ್ನ ಮಾಡಿದ್ದಾರೆ.
ಸುಶ್ಮಿತಾ ತಂದೆಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಇವಳು ಕೊನೆಯವಳಾಗಿದ್ದಳು. ಮನೆತನದ ಸಂಸ್ಕಾರ ಮುರಿದು ಮಗಳು ಓಡಿಹೋಗಿದ್ದರಿಂದ ಮನನೊಂದಿರುವುದಾಗಿ ಶಿವಗೌಡ ಪಾಟೀಲ ಪಾಟೀಲ ತಿಳಿಸಿದ್ದು, ಈ ಬಗ್ಗೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ.