ಬಾಗಲಕೋಟೆ: ಮನುಷ್ಯರನ್ನು ಮನುಷ್ಯರಂತೆ ಕಾಣುವ ಗುಣ ಬೆಳೆಸಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಸುವ ಬದುಕು ಬೇರೆ ಯಾವ ವಿಶ್ವ ವಿದ್ಯಾಲಯಗಳಲ್ಲಿ ದೊರೆಯುವದಿಲ್ಲ. ನಮ್ಮ ಮಕ್ಕಳಿಗೆ ಸಂಸ್ಕಾರ, ನೀತಿ ಪಾಠ, ಪ್ರೀತಿ, ವಾತ್ಸಲ್ಯ ಮೂಲಕ ಬೆಳೆಸಬೇಕಿದೆ. ಅಂದಾಗ ಉತ್ತಮ ಸಮಾಜ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಇಲ್ಲಿನ ಕಸಪಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಆಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಲಾವಿದರು, ಸಾಹಿತಿಗಳು, ಪತ್ರಕರ್ತರು ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಉತ್ತರದ ಸಾಲು ದೀಪಗಳು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತಂದೆ, ತಾಯಿಗಳ ನೆರಳಿನಲ್ಲಿ ಬೆಳೆಯಬೇಕು. ಸಾಮಾನ್ಯ ಶಾಲೆಗಳಲ್ಲಿ ಓದಬೇಕು. ಬೆಂಗಳೂರು, ಮಂಗಳೂರು, ಮುಂಬಯಿ ಸೇರಿದಂತೆ ನಾನಾ ಭಾಗಕ್ಕೆ ಬೋರ್ಡಿಂಗ್ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಹೀಗಾಗಿ ವಯಸ್ಸಾದ ಬಳಿಕ ತಂದೆ, ತಾಯಿಗಳ ನೋವು ಮಕ್ಕಳಿಗೆ ಅರ್ಥವಾಗುತ್ತಿಲ್ಲ. ಕರಿಯತ್ ಕಾಳಿಂಗ ಬಿಳಿಯತ್ತ ಮಾಲಿಂಗ ಎನ್ನುವ ಜಾದಪದ ಗೀತೆ, ತಾಯಂದಿರರ ಜೋಗುಳಗಳು ಮಾಯವಾಗ ತೊಡಗಿವೆ. ಇದರಿಂದ ಕರಳು ಬಳ್ಳಿಯ ಸಂಬAಧಗಳಲ್ಲಿ ಗಟ್ಟಿತನ ಉಳಿಯುತ್ತಿಲ್ಲ. ನಾವೆಲ್ಲ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದರು.
ಇನ್ನು ಕೃತಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ದಿಗ್ಗಜ ಪತ್ರಕರ್ತ ಸೇವೆ, ಕಾರ್ಯಗಳನ್ನು ಬಿಚ್ಚಿಟ್ಟಿರುವುದು ಸಂತಸದ ಸಂಗತಿ. ಆದರೇ ಇಂದು ಸುದ್ದಿಗಳಲ್ಲಿ ಮನುಷ್ಯರನ್ನು ಮನುಷ್ಯರಾಗಿ ಕಾಣುತ್ತಿಲ್ಲ. ಸುದ್ದಿಗಳಲ್ಲಿ ಗೌರವ ಕಾಣುತ್ತಿಲ್ಲ. ಯಾವಾಗ ಬೇಕಾದರು ಯಾರನ್ನು ಹಿರೋ, ಝಿರೋ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಸಾಹಿತ್ಯ, ಸಂಸ್ಕೃತಿ, ಕಲೆ, ಸಂಸ್ಕಾರ ಇಲ್ಲದೇ ಹೋದರೇ ಬದುಕು ನಡೆಸುವುದು ದುರ್ಲಭವಾಗಲಿದೆ. ಇತಿಹಾಸ ಓದದ ಹೊರತ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಧ್ಯಮ ಕ್ಷೇತ್ರ ಇಂದು ಸೇವೆ, ಕರ್ತವ್ಯಾಗಿ ಉಳಿಯುತ್ತಿಲ್ಲ. ಸತ್ವ ಹೀನವಾದ ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಸಾಧ್ಯವಾಗುತ್ತಿಲ್ಲ. ಜನರ ಜೀವನ ಚಿಂತನೆಗಳು ಪರ ಇರುವ ವಿಷಯಕ್ಕೆ ಮಹತ್ವ ನೀಡಬೇಕಿದೆ. ಜಾತಿ, ಧರ್ಮ, ಮರ್ಯಾದೆ ಹತ್ಯೆ ಅಂತಹ ಸುದ್ದಿಗಳು ವಿಜೃಂಭಿಸುತ್ತೀವೆ. ಮನೆಯಲ್ಲಿ ತಂದೆ, ತಾಯಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾ ಕುಳಿತುಕೊಂಡರೇ ಮಕ್ಕಳಿಗೆ ಪಾಠ ಹೇಳುವವರು ಯಾರು? ನಿತ್ಯವು ಒಂದು ಗಂಟೆಗಳ ಕಾಲ ಮಕ್ಕಳ ಜೊತೆಗೆ ಪಾಲಕರು, ಪೋಷಕರು ಕಾಲ ಕಳೆಯಬೇಕು ಎಂದು ತಿಳಿಸಿದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಪಾಲಕರು ಮಕ್ಕಳಿಗೆ ಇಂಜಿನಿಯರಿAಗ್ , ವಿಜ್ಞಾನಿಗಳು, ಡಾಕ್ಟರ್, ಐಎಎಸ್, ಕೆಎಎಸ್ ಅಽಕಾರಿಗಳಾಗಿ ಆಗಬೇಕು ಅಂತ ಕನಸು ಕಾಣುತ್ತೀರಾ? ಹಾಗೇ ದೇಶಕ್ಕೆ ಅನ್ನ ನೀಡುವ ರೈತರು, ಕಾಯುವ ಸೈನಿಕರು, ಸಮಾಜ ಸೇವೆ ಮಾಡುವ ಪತ್ರಕರ್ತರಾಗಬೇಕು ಅಂತ ಮಕ್ಕಳಲ್ಲಿ ಬಿತ್ತಬೇಕು. ಗ್ರಾಮ, ನಗರಗಳಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಬೆಳಕು ಚಲ್ಲುವ ಕೆಲಸ ಪತ್ರಕರ್ತರು ಮಾಡುತ್ತಾರೆ. ಅದಕ್ಕೆ ಸಾರ್ವಜನಿಕರು ಧ್ವನಿಯಾಗಿ ನಿಲ್ಲಬೇಕು. ಮಾಧ್ಯಮವನ್ನು ಉಳಿಸಿ ಬೆಳೆಸಬೇಕು, ಪತ್ರಿಕೆಗಳ ಭದ್ರತೆಗೆ ಪ್ರತಿಯೊಬ್ಬರು ಪತ್ರಿಕೆಗಳನ್ನು ಓದಬೇಕು ಎಂದರು.
ಉದ್ಯಮಿ ಲಕ್ಷ÷್ಮಣ ನಿರಾಣಿ ಮಾತನಾಡಿ, ಯಾವುದೇ ಸರ್ಕಾರ ಇರಲಿ ಸಾಹಿತ್ಯ, ಪತ್ರಕರ್ತರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಯಾರಿಗೂ ಸಾಹಿತಿಗಳು, ಪತ್ರಕರ್ತರು ಕೈ ಚಾಚುವಂತಾಗಬಾರದು. ಸಮಾಜದಲ್ಲಿ ಈ ಇಬ್ಬರು ಕನ್ನಡಿ ಇದ್ದಂತೆ. ಅವರಿಗೆ ಗೌರವ ಸಲ್ಲುವ ಕೆಲಸವಾಗಬೇಕು ಎಂದ ಅವರು, ಉದ್ಯಮಿ, ದೊಡ್ಡ ಅಽಕಾರಿ ಆಗಬೇಕು ಅಂತಾರೆ ತಂದೆ, ತಾಯಿಗಳು. ಆದರೇ ಸಮಾಜಕ್ಕೆ ಉತ್ತಮ ನಾಗರಿಕರಾಗಲು ಮೊದಲು ನೀತಿ ಪಾಠ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತರದ ಸಾಲು ದೀಪಗಳು ಕೃತಿ ಬಿಡುಗಡೆಗೊಳಿಸಲಾಯಿತು. ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಧಾರವಾಡ ಕಾನಿಪ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಆನಂದ ಹಲಕುರ್ಕಿ, ಸಿ.ಎಂ.ಜೋಶಿ ಇತರರು ಇದ್ದರು.