ಜಿಲ್ಲೆ

ಪ್ರೀತಿ ಪಾತ್ರರಿಗೆ ಕರೆದು ಊಟ ಹಾಕ್ತಾರೆ..

ಚಾಮರಾಜನಗರ: ಹೊಸ ವರ್ಷಕ್ಕೆ ಪ್ರೀತಿ ಪಾತ್ರರನ್ನು ಕರೆದು ಊಟ ಹಾಕುತ್ತಾರೆ. ವಿಶ್ವಾಸಕ್ಕೆ ಊಟಕ್ಕೆ ಕರೆಯುತ್ತಾರೆ ಊಟ ಮಾಡ್ಕೊಂಡು ಬರ್ತಾರೆ ಎಂದು ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಡಿನ್ನರ್ ಪಾಲಿಟಿಕ್ಸ್ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸುಮ್ಮ ಸುಮ್ಮನೆ ಇಲ್ಲದೆ ಇರೋದೆಲ್ಲಾ ಹೇಳೋಕೆ ಆಗಲ್ಲ. ಶಾಸಕರು ಏನು ಗ್ರಾಮ ಪಂಚಾಯಿತಿ ಸದಸ್ಯರಾ? ಶಾಸಕರಿಗೆ ಸಾಕಷ್ಟು ತಿಳುವಳಿಕೆ ಇದೆ. ಯಾವಾಗ ಏನು ತೀರ್ಮಾನ ತೆಗೆದುಕೊಳ್ಳಬೇಕು ಅಂತ ಗೊತ್ತಿದೆ ಎಂದರು. ಶೇ.60 ಕಮಿಷನ್ ಆರೋಪವನ್ನು ಸಾಬೀತು ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಸಾಬೀತು ಮಾಡಲಿ ನೋಡೋಣ ಎಂದರು.