ಹಾಸನ: ನನದಿ ಫಿಲ್ಮ್ ಪ್ರೊಡಕ್ಷನ್ಸ ನಿರ್ಮಾಣದ ಅಡಿಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಕನ್ನಡದ ಶಾರ್ಟ್ ಫಿಲ್ಮ್ ಕೇಸ್ ನಂಬರ್ 143 ಕಿರು ಚಿತ್ರದ ಪೋಸ್ಟರ್ ಬಿಡುಗಡೆಯನ್ನು ಮಾಜಿ ಶಾಸಕ ಪ್ರೀತಂ ಗೌಡ ನೆರವೇರಿಸಿದರು.
ಇದೇ ಮೊದಲ ಬಾರಿಗೆ ಹಾಸನದ ಯುವ ಪ್ರತಿಭೆಗಳಾದ ’ದರ್ಶನ್’ ಹಾಗೂ ’ನಂದಿನಿ’ಯವರು ನಾಯಕ ನಾಯಕಿಯಾಗಿ ನಟಿಸಿದ್ದು ನಿನ್ನೆ ಸಂಜೆ ಖಾಸಗಿ ಹೋಟೆಲ್ ನಲ್ಲಿ ಹಾಸನದ ಮಾಜಿ ಶಾಸಕರಾದ ಪೀತಮ್ ಗೌಡ ಹಾಗೂ ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹಾಗೂ ಇನ್ನಿತರ ಅನೇಕ ಗಣ್ಯರ ಸಮ್ಮುಖದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣು, ಮುಖಂಡರಾದ ಸುರೇಶ್ ಇತರರು ಇದ್ದರು.