ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕುರಿತು ಸುಳ್ಳು ಮಾಹಿತಿ ನೀಡಿದ್ದು, ಅವರಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕಿಡಿ ಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಮಣಿಕಂಠ, ಮೈಸೂರು ಸ್ಯಾಂಡಲ್ ಸೋಫ್ ಅಕ್ರಮ ಪ್ರಕರಣದಲ್ಲಿ ನನ್ನ ಸ್ನೇಹಿತರು ಇದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ನನ್ನ ಸ್ನೇಹಿತನ ಹೆಸರು ಮಹಾವೀರ ಮಹೇಂದ್ರ ಜೈನ್ ಇದೆ. ಆದರೆ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿ ಮಹಾವೀರ ಬಾಬುಲಾಲ್ ಜೈನ್ ಹೆಸರು ಹೇಳಿದ್ದು, ಅವರು ನನ್ನ ಸ್ನೇಹಿತ ಅಲ್ಲ. ವಿನಾಕಾರಣ ಸುಳ್ಳು ಹೇಳಿ ನನ್ನ ಸ್ನೇಹಿತನ ಹೆಸರನ್ನು ತಳಕು ಹಾಕಿ, ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಅಕ್ಕಿ ಮಿಲ್ ಮೇಲೆ ವಿನಾಕಾರಣ ದಾಳಿ ನಡೆಸಿದ್ದಾರೆ. ನಮ್ಮಲ್ಲಿ ಒಳ್ಳೆ ಅಕ್ಕಿ ಇದೆ. ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಬೇಕು. ಆದರೆ ಪೊಲೀಸರು ದಾಳಿ ನಡೆಸಿದ್ದು, ಯಾವ ನ್ಯಾಯ. ಅಧಿಕಾರ ದುರುಪಯೋಗ ಪಡೆಸಿಕೊಂಡು ನಮ್ಮ ಸಹೋದರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.