ಹಾಸನ : ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಗೆ ಆಸಕ್ತಿ ವಹಿಸಬೇಕು ಎಂದು ನಿವೃತ್ತ ಉಪ ಪ್ರಾಂಶುಪಾಲ ಎಚ್.ಎಂ.ಪಾರ್ಥಸಾರಥಿ ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಟ್ಟಣದ ಹಾಸನ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗ ಪಠ್ಯ ಚಟುವಟಿಕೆ ಕಾರ್ಯಾಗಾರದಲ್ಲಿ ಮಾತನಾಡಿದರು. ಮಕ್ಕಳನ್ನು ಕಂಠಪಾಠದಿಂದ ಮುಕ್ತಿಗೊಳಿಸಿ ಪ್ರಾಯೋಗಿಕವಾಗಿ ಬೋಧನೆ ಮಾಡುವುದರಿಂದ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಬಹುದು. ಈ ಹಿನ್ನೆಲೆಯಲ್ಲಿ ಪ್ರಯೋಗಾತ್ಮಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 10 ನೇ ತರಗತಿ ವಿಜ್ಞಾನ ವಿಷಯದಲ್ಲಿ 200 ಪ್ರಯೋಗ ಪಠ್ಯಗಳನ್ನು ಅಳವಡಿಸಲಾಗಿದೆ ಎಂದರು. ಪ್ರಾಂಶುಪಾಲ ಪಿ.ನವೀನ್ ಮಾತನಾಡಿದರು.