ಸಂಕೇಶ್ವರ: ಇಂಜನಿಯರ್ಗಳು ದೇಶದ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕು ಎಂದು ನಿವೃತ್ತ ತಾಪಂ ಇಒ ಎ.ಬಿ. ಪಟ್ಟಣಶೆಟ್ಟಿ ಹೇಳಿದರು.
ಪಟ್ಟಣದ ಕಣಗಲಿ ಬಡಾವಣೆಯಲ್ಲಿ ಹೈಟೆಕ್ ಡೆವಲಪರ್ಸ್ ಹಾಗೂ ಪವನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವತಿಯಿಂದ ಇಂಜಿನಿಯರ್ಸ್ ದಿನದ ನಿಮಿತ್ತ ಹಮ್ಮಿಕೊಂಡಿದ್ದ ಇಂಜಿನಿಯರ್ಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುರಸಭೆ ಮುಖ್ಯ ಅಭಿಯಂತ ರವೀಂದ್ರ ಗಡಾದ ಮಾತನಾಡಿ, ಇಂಜಿನಿಯರ್ಗಳು ಗುಣಮಟ್ಟದಲ್ಲಿ ಎಂದೂ ಹೊಂದಾಣಿಕೆ ಮಾಡಿಕೊಳ್ಳದೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದರು. ವಿಶ್ವಚೇತನ ವಿದ್ಯಾ ಸಂಸ್ಥೆ ಅಧ್ಯ ಮಹೇಶ ದೇಸಾಯಿ ಮಾತನಾಡಿ, ಇಂಜಿನಿಯರ್ಗಳು ಶಿಸ್ತು, ಯೋಜನಾಬದ್ಧ ರ್ನಿಣಯ, ಅಭಿವೃದ್ಧಿಪರ ದೂರದೃಷ್ಟಿ ಅಳವಡಿಸಿಕೊಳ್ಳಬೇಕು ಎಂದರು. ಉದ್ಯಮಿ ಪವನ ಕಣಗಲಿ ಮಾತನಾಡಿ, ಯುವ ಇಂಜಿನಿಯರ್ಗಳಿಗೆ ಹಿರಿಯರು ಹೊಸ ಚಿಂತನೆ, ಆಲೋಚನೆಗಳನ್ನು ನೀಡಬೇಕು ಎಂದರು.
ಸಾಧಕ ಇಂಜಿನಿಯರ್ಗಳನ್ನು ಸತ್ಕರಿಸಲಾಯಿತು. ಯುವ ಮುಖಂಡ ಕುಮಾರ ಬಸ್ತವಾಡಿ, ಇಂಜಿನಿಯರ್ಗಳಾದ ಪ್ರಹ್ಲಾದ ಕುರಬೇಟ, ಸಾಧಿಕ್ ಮೋಮಿನ್, ಸಲೀಂ ಅತ್ತಾರ, ನಾವೇದ ಅತ್ತಾರ, ಅಮೀರ್ ಸಯ್ಯದ್, ಭೂಷಣ ಕುಲಕರ್ಣಿ, ಅಲಿ ಸಯ್ಯದ್, ಭಾಗವತ ಪ್ರತಿಕ್, ಬಾಬು ಜಾಧವ, ಬಸವರಾಜ ಕಡಾಡಿ, ಅಯ ಪಾಟೀಲ, ಎಸ್.ಆರ್. ಮಾಳಿ ಇತರರಿದ್ದರು.