ಚಿಟಗುಪ್ಪ: ಪ್ರತಿಯೊಂದು ಇಲಾಖೆಯ ಸಕರ್ಾರಿ ನೌಕರರು ಸಾರ್ವಜನಿಕರ ಕೆಲಸವನ್ನು ದೇವರ ಸೇವೆ ಎಂದು ತಿಳಿದು ಪ್ರಾಮಾಣಿಕತೆಯಿಂದ ನಿರ್ವಹಿಸಿದಲ್ಲಿ ಜನರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಸಂತ ಮಡಿವಾಳೇಶ್ವರ ಗವಿಯ ಕಲ್ಯಾಣ ಮಂಟಪದಲ್ಲಿ ಶನಿವಾರ ರಾಜ್ಯ ಸಕರ್ಾರಿ ನೌಕರರ ಸಂಘ ಏರ್ಪಡಿಸಿದ್ದ ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಕರ್ಾರಿ ಶಾಲಾ-ಕಾಲೇಜಿನ ವಿದ್ಯಾಥರ್ಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದದಿಂದ ನೂತನ ತಾಲೂಕು ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ವೈಶಿಷ್ಟೃಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಷ ತಂದಿದೆ ಎಂದರು.
ಕ್ಷೇತ್ರದಲ್ಲಿ ಸಕರ್ಾರಿ ನೌಕರರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುವಲ್ಲಿ ಹಾಗೂ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಮನಃಪೂರ್ವಕವಾಗಿ ಶ್ರಮಿಸಲು ಮನವಿ ಮಾಡುತ್ತೇನೆ. ನೌಕರರ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ವಿಧಾನ ಪರಿಷತ್ತಿನಲ್ಲಿ ನಾನು ಧ್ವನಿ ಎತ್ತುತೇನೆ. ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗಿ. ಸಂಘಕ್ಕೆ ಸದಾ ನನ್ನ ಬೆಂಬಲವಿರಲಿದೆ ಎಂದರು.
ಎಂಎಲ್ಸಿ ಶಶೀಲ್ ನಮೋಶಿ ಮಾತನಾಡಿ, ವಿದ್ಯಾಥರ್ಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶ್ರಮಪಟ್ಟು ಅಭ್ಯಾಸ ಮಾಡಬೇಕು. ಕಲ್ಯಾಣ ಕನರ್ಾಟಕದ ಈ ಭಾಗದ ಶಿಕ್ಷಕರು ಹಾಗೂ ನೌಕರರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ನೇಮಕಾತಿ, ವಗರ್ಾವಣೆ, ವೇತನ ತಾರತಮ್ಯ ಈ ಎಲ್ಲ ಅಂಶಗಳ ಕಡೆ ಸಕರ್ಾರ ಗಮನ ಹರಿಸುತ್ತಿದೆ. ಸಮಸ್ಯೆಗಳಿಗೆ ಸ್ಪಂದಿಸಲು ನಾನು ಯಾವತ್ತೂ ನಿಮ್ಮ ಪರವಾಗಿದ್ದೇನೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಸಂಘ ಸಮಸ್ತ ಸಕರ್ಾರಿ ನೌಕರರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾನ ವೇತನ, ಎನ್ಪಿಎಸ್ ರದ್ದತಿ ಸೇರಿ ಮುಂತಾದ ಬೇಡಿಕೆಗಳನ್ನು ಸಕರ್ಾರದ ಮುಂದಿಟ್ಟಿದ್ದೇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಬೇಲೂರೆ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ರಾಜಶೇಖರ ಮಂಗಲಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ, ಹುಮನಾಬಾದ್ ತಾಲೂಕು ನೌಕರರ ಸಂಘದ ಅಧ್ಯಕ್ಷ ನಾಗಶೆಟ್ಟಿ ಡುಮಣೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಖ್ ಮೆಹಬೂಬ್, ಅಶೋಕ ಮಹೇಂದ್ರಕರ್, ರಾಜಪ್ಪ ಜಮಾದಾರ್, ಪ್ರಮೀಳಾ ರೆಡ್ಡಿ, ವೆಂಕಟೇಶ ಗುಡಾಳ, ಡಾ.ವಿಜಯ ಹಿರಸ್ಕರ್, ಕೃಷ್ಣಾರೆಡ್ಡಿ, ವೆಂಕಟಪ್ಪ, ಸಂಜೀವಕುಮಾರ ಕಾಂಗೆ, ಪ್ರೀತಂಸಿಂಗ್, ದಿಲೀಪಕುಮಾರ ಬಗಲಕರ್, ಶಾಂತಕುಮಾರ ಮಹೇಂದ್ರಕರ್, ರವಿಚಂದ್ರ ಶಿವಪೂಜಿ ಇತರರಿದ್ದರು. ರಾಜಶೇಖರ ಉಪ್ಪಿನ್ ಸ್ವಾಗತಿಸಿದರು. ಶಾಂತಕುಮಾರ ಪಾಟೀಲ್ ನಿರೂಪಣೆ ಮಾಡಿದರು. ಪ್ರಭು ಕಂಚನಾಳ ವಂದಿಸಿದರು. ಸಂಘದ ತಾಲೂಕು ಪದಾಧಿಕಾರಿಗಳು ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಖಾಲಿ ಹುದ್ದೆ ಭತರ್ಿಗೆ ಕ್ರಮ ವಹಿಸಿ: ಚಿಟುಗುಪ್ಪ ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭತರ್ಿ ಮಾಡಲು ಕ್ರಮ ವಹಿಸಬೇಕು. ಎಲ್ಲ ಇಲಾಖೆಗಳ ಕಾಯರ್ಾಲಯ ಶೀಘ್ರ ತೆರೆಯಬೇಕು. ತಾಲೂಕು ಮಟ್ಟದ ಅಧಿಕಾರಿ ಹುದ್ದೆಗಳನ್ನು ತುಂಬಬೇಕು. ಇಲ್ಲವೇ ತಾತ್ಕಾಲಿಕವಾಗಿ ನಿಯೋಜನೆ ಮಾಡಬೇಕು. ಸಂಘದ ಕಾಯರ್ಾಲಯಕ್ಕೆ ಸ್ಥಳ ನೀಡಬೇಕು. ಸಕರ್ಾರಿ ನೌಕರರ ಭವನ ನಿಮರ್ಾಣಕ್ಕೆ ಸ್ಥಳ ಹಾಗೂ ಅನುದಾನ ಸೌಲಭ್ಯ ಒದಗಿಸಿಕೊಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯರಲ್ಲಿ ಸಕರ್ಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಬೇಲೂರೆ ಮನವಿ ಮಾಡಿದರು