ಜಿಲ್ಲೆ

ಪ್ರಾಣಿಗಳ ಬಲಿ ನೀಡುವುದು ಮಹಾಪರಾಧ

ಚಾಮರಾಜನಗರ : ವೈಜ್ಞ್ಞಾನಿಕ ಕಾಲಘಟ್ಟದಲ್ಲೂ ಪ್ರಾಣಿಗಳನ್ನು ಬಲಿ ನೀಡುವುದು ಮಹಾಪರಾಧ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ದಾನೇಶ್ವರೀ ಅಭಿಪ್ರಾಯಪಟ್ಟರು.

ತಾಲೂಕಿನ ಚಂದಕವಾಡಿ ಬ್ರಹ್ಮಾಕುಮಾರಿ ಗೀತಾ ಪಾಠಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಚೈತನ್ಯ ನವ ದುರ್ಗೆಯರ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ಸಂದರ್ಭದಲ್ಲಿ ಪ್ರಾಣಿಗಳ ವಧೆ ಮಾಡುವುದು ಹಾಗೂ ಬಲಿಕೊಡುವುದು ಮಹಾಪರಾಧ ಎಂಬ ಕಾನೂನಿದ್ದರೂ ಯಾರಿಂದಲೂ ತಡೆಯಲಾಗುತ್ತಿಲ್ಲ. ಸಾತ್ವಿಕ ಆಹಾರದಲ್ಲೇ ಸಾಕಷ್ಟು ಪ್ರೋಟೀನ್‌ಗಳಿದ್ದರೂ ಕೆಲವರು ವಿಪರೀತ ಬುದ್ಧಿಯವರಾಗಿ ತಾಮಸಿಕ ಆಹಾರವನ್ನೇ ಜೀವನದ ಅಂಗವನ್ನಾಗಿ ಮಾಡಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ಬಿ.ಕೆ.ಆರಾಧ್ಯ, ಶ್ರೀನಿವಾಸ್, ಲಕ್ಷ್ಮಿನರಸಿಂಹ ಪ್ರಸಾದ್, ಬಿ.ಕೆ.ಭಾಗ್ಯಾ, ಮಾಣಿಕ್ಯ ಇತರರು ಇದ್ದರು.