ಜಿಲ್ಲೆ

ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಸಿಮೆಂಟ್ ತೊಟ್ಟಿ ಅಳವಡಿಕೆ

ಮೈಸೂರು: ಬೇಸಿಗೆ ಹಿನ್ನೆಲೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಅನುಕೂಲವಾಗುವಂತೆ ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ನ್ಯಾಯಾಲಯದ ಮುಂಭಾಗ ಸಿಮೆಂಟ್‌ನ ನೀರಿನ ತೊಟ್ಟಿ ಅಳವಡಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಸತತ 4 ವರ್ಷಗಳಿಂದ ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ ಅಭಿಯಾನವನ್ನು ಸ್ನೇಹಿತರೊಡನೆ ಸೇರಿ ಕೈಗೊಳ್ಳುತ್ತಾ ಬರಲಾಗುತ್ತಿದೆ. ಈಗಾಗಲೇ ಚಾಮುಂಡಿ ಬೆಟ್ಟದ ತಪ್ಪಲು, ಕೆಲ ಸರ್ಕಾರಿ ಶಾಲೆ, ಜಲಪುರಿ ಕ್ವಾರ್ಟರ್ಸ್, ಸಿದ್ದಾರ್ಥ ಲೇಔಟ್ ಸೇರಿದಂತೆ ಇನ್ನಿತರ ಭಾಗದಲ್ಲಿ 30ಕ್ಕೂ ಹೆಚ್ಚು ನೀರಿನ ತೊಟ್ಟಿಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಬೇಸಿಗೆ ಆರಂಭವಾಗಿದ್ದು, ಸಾರ್ವಜನಿಕರ ಸ್ಥಳಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರು ಸಿಗುವುದು ಕಷ್ಟ. ಹಾಗಾಗಿ ಬೇಸಿಗೆ ಮುಗಿಯುವವರೆಗೂ ಪ್ರಾಣಿ, ಪಕ್ಷಿಗಳಿಗೆ ದಾಹ ನೀಗಿಸಲು ಸಾರ್ವಜನಿಕರು ಸ್ವಯಂ ಪ್ರೆರಿತವಾಗಿ ಅಲ್ಲಲ್ಲಿ ತೆರೆದ ಬಾಟಲ್‌ಗಳಲ್ಲಿ ನೀರು ಇಟ್ಟು ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ಕಾರ‌್ಯ ಮಾಡಬೇಕು ಎಂದು ಮನವಿ ಮಾಡಿದರು.
ಉದ್ಯಮಿ ರಾಜೇಶ್ ಪಳನಿ, ಮುಖಂಡರಾದ ನಟರಾಜ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜಿ.ಎಂ.ಪಂಚಾಕ್ಷರಿ, ಮುಖಂಡರಾದ ಕಡಕೋಳ ಜಗದೀಶ್, ಜಿ.ರಾಘವೇಂದ್ರ, ಸೈಯದ್ ಸಾಧಿಕ್, ರವಿಚಂದ್ರ, ನಂದೀಶ್‌ನಾಯಕ್, ಮಹೇಶ್, ನವೀನ್ ಕೆಂಪಿ ಇತರರು ಇದ್ದರು.