ಮಾನ್ವಿ: ಬೇಸಿಗೆ ಸಮಯದಲ್ಲಿ ಮಾನವೀಯ ದೃಷ್ಟಿಯಿಂದ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡುವಂತೆ ಪಕ್ಷಿಪ್ರೇಮಿ ಸಲ್ಲಾವುದ್ದೀನ್ ಮಾನ್ವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಸಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಹಸಿರು ಪಡೆ ಎನ್‌ಜಿಸಿ ಇಕೋ ಕ್ಲಬ್ ಪರಿಸರ ರಕ್ಷಣೆ ಮತ್ತು ಪಕ್ಷಿಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾಗತೀಕರಣ, ತಾಂತ್ರೀಕರಣದಿಂದಾಗಿ ಪಕ್ಷಿ ಸಂಕುಲಗಳು ನಶಿಸಿ ಹೋಗುತ್ತಿವೆ. ಈ ಎಲ್ಲಾ ಪಕ್ಷಿಗಳ ರಕ್ಷಣೆಗಾಗಿ ನಾವುಗಳು ನೀರಿನ ಸೌಕರ್ಯ ಮಾಡಬೇಕಿದೆ. ಪಕ್ಷಿಗಳ ರಕ್ಷಣೆ ಮಾಡಲು ಎಲ್ಲಾರೂ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ಪಕ್ಷಿಗಳು ಚಿತ್ರಗಳಲ್ಲಿ ನೋಡುವ ಪರಿಸ್ಥಿತಿ ಬರಬಾರದು ಎಂದು ಹೇಳಿದರು.
ಶಿಕ್ಷಕರಾದ ಆಪಲಯ್ಯ, ವೆಂಕಟೇಶ, ಮಂಗಳಾ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳಿದ್ದರು.
ಪರಿಸರ ಚಿಂತಕ ಹಾಗೂ ವ್ಯಂಗ್ಯ ಚಿತ್ರಕಾರ ಈರಣ್ಣ ಬೆಂಗಾಲಿ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಉತ್ತಮ ವಾತಾವರಣದ ಜತೆಗೆ ಸಕಾಲಕ್ಕೆ ಮಳೆಯಾಗಲಿದೆ. ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಮನೆ ಹಾಗೂ ಬಯಲು ಪ್ರದೇಶದಲ್ಲಿ ನೀರಿನ ಸೌಲಭ್ಯ ವ್ಯವಸ್ಥೆ ಮಾಡಲು ಕೋರಿದರು.