ಕೆಂಭಾವಿ : ಪ್ರಾಚೀನ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕ. ಹೀಗಾಗಿ ಅವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಖ್ಯಾತ ಇತಿಹಾಸ ಸಂಸೋಧಕ ಹಾಗೂ ಇತಿಹಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯ ನಿಂಗನಗೌಡ ದೇಸಾಯಿ ಹೇಳಿದರು.
ಏವೂರನ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾಡಿನ ಬಹುದೊಡ್ಡ ಆಸ್ತಿಯಾಗಿರುವ ದೇವಲಯಗಳು ಸಂರಕ್ಷಣೆ ಮಾಡುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ ಎಂದರು. ಗ್ರಾಮದ ಸೋಮೇಶ್ವರ ದೇವಾಲಯ, ಪುಷ್ಕರಣಿ, ಜೈನ ಬಸದಿ ಹಾಗೂ ಜಟ್ಟೇಶ್ವರ ದೇವಾಲಯಗಳ ಇತಿಹಾಸ ಮತ್ತು ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ವೇಳೆ ಇತಿಹಾಸ ಅಕಾಡೆಮಿಯ ಇತಿಹಾಸ ಉಳಿಸಿ ಭಿತ್ತಪತ್ರ ಬಿಡುಗಡೆ ಮಾಡಲಾಯಿತು. ಪ್ರಾಧ್ಯಾಪಕ ಡಾ.ಯಂಕನಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ದಂಡಪ್ಪಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ನಿಜಪ್ಪ ಸ್ವಾಗತಿಸಿದರು. ಸಫಿಯಾಬೇಗಂ ವಂದಿಸಿದರು. ಬಸವರಾಜ ನಿರೂಪಣೆ ಮಾಡಿದರು.