ಜಿಲ್ಲೆ

ಪ್ರಾಚಾರ್ಯ ಶ್ರೀನಿವಾಸ ಇನಾಮದಾರಗೆ ಸನ್ಮಾನ

ನರಗುಂದ: ಗುರುಪೂರ್ಣಿಮೆ ನಿಮಿತ್ತ ಪಟ್ಟಣದ ಭಾರತೀಯ ಸಂಗೀತ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರಾಚಾರ್ಯ ಶ್ರೀನಿವಾಸ ಇನಾಮದಾರ ಅವರನ್ನು ಗುರುವಾರ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಶ್ರೀನಿವಾಸ ಇನಾಂದಾರ ಮಾತನಾಡಿ, ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಮಹಾಭಾರತದ ಕರ್ತೃು ವೇದವ್ಯಾಸರು ಜನಿಸಿದ ದಿನವಾಗಿದ್ದರಿಂದ ಇದನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಗುರುಗಳನ್ನು ಗೌರವಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ರೇಣುಕಾ ಗುಡಿಸಾಗರ ಮಾತನಾಡಿ, ಗುರುಪೂರ್ಣಿಮೆ ದಿನದಂದು ಗುರುಸೂತ್ರ ಸಾವಿರಪಟ್ಟು ಪ್ರಭಾವಶಾಲಿಯಾಗಿರುತ್ತದೆ. ಭಾರತೀಯ ಶಾಸ್ತ್ರೀಯ ಸಂಗೀತವು ಗುರು-ಶಿಷ್ಯ ಪರಂಪರೆಯನ್ನು ನಿರಂತರವಾಗಿ ಪಾಲಿಸಬೇಕು ಎಂದರು.

ಅನ್ವಿತಾ ಅಡ್ಡಣಗಿ, ಕೃತಿ ಆನೆಗುಂದಿ, ಆರೋಹಿ ಗುಜಮಾಗಡಿ, ತನಿಷ್ಕಾ ತಡಸದ, ಯಶೀರಾ ನದಾಫ, ಅನನ್ಯಾ ಆನೆಗುಂದಿ, ವಿಜಯಲಕ್ಷ್ಮೀ ತಡಸದ, ವೀಣಾ ಇಂಗಳಳ್ಳಿ, ರೇಣುಕಾ ಗುಡಿಸಾಗರ, ಶ್ರೀನಿಧಿ ಕುಲಕರ್ಣಿ, ಮಂಜುಳಾ ಮಿಕ್ಕಲ್, ಮಾಣಿಕ್ಯ ಯರಗಟ್ಟಿ, ಕೃಷ್ಣವೇಣಿ ಕನಕರಡ್ಡಿ, ವೈಷ್ಣವಿ ಮುಳ್ಳೂರ, ವಸಂತ ಸುಳ್ಳದ, ಚೇತನ ಬಿ., ನಿತೀನ್ ಬಿ., ಸುಜಯ ಕುಲಕರ್ಣಿ, ಸರಾಫ್ ವೇದಶ್ರೀ ಸಜ್ಜನ, ತನುಷ್ಕಾ ಮಾಲೀನಮಠ, ಪಾರ್ವತಿ ಗುಡ್ಡಾಪೂರಮಠ, ಸುಷ್ಮಾ ಚುಳಕಿ, ಶ್ರೀನಿಧಿ ಕಂಠಿ, ಇತರರು ಉಪಸ್ಥಿತರಿದ್ದರು. ರೇಣುಕಾ ಗುಡಿಸಾಗರ ಕಾರ್ಯಕ್ರಮ ನಿರ್ವಹಿಸಿದರು.