ಜಿಲ್ಲೆ

ಪ್ರಾಕೃತಿಕ ವಿಕೋಪ ತಡೆಗೆ ಸನ್ನದ್ಧರಾಗಿ

ನಾಪೋಕ್ಲು: ಬಿರುಸಿನ ಗಾಳಿ, ಮಳೆಯಿಂದ ಸಂಭವಿಸುವ ಅವಘಡಗಳನ್ನು ತಪ್ಪಿಸಲು ಸನ್ನದ್ಧರಾಗಿರಬೇಕು ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಪಿ.ಜಿ.ರಾಘವೇಂದ್ರ ಹೇಳಿದರು.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಠಾಣೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಠಾಣಾಧಿಕಾರಿ ಪಿ.ಜಿ.ರಾಘವೇಂದ್ರ ಮಾತನಾಡಿದರು.

ಸಭೆಯಲ್ಲಿ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಯುವ ಈಜುಗಾರರು, ಜೆಸಿಬಿ, ಕ್ರೇನ್ ಮಾಲೀಕರು ಮತ್ತು ಆಪರೇಟರ್ ಗಳು, ಆಂಬುಲೆನ್ಸ್ ಮತ್ತು ಅವುಗಳ ಚಾಲಕರು ಮತ್ತು ಮಾಲೀಕರು, ವುಡ್‌ಕಟ್ಟರ್‌ಗಳು ಹಾಜರಾಗಿ ಮುಂದೆ ಬರುವ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎದುರಿಸಲು ಎಲ್ಲರೂ ಕೈ ಜೋಡಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ ಸಂದರ್ಭ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.