ಚಿಕ್ಕನಾಯಕನಹಳ್ಳಿ: ತಾಲೂಕಿನ ಮೇಲನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಎನ್.ಸತೀಶ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮವಸತಿ ಶಾಲೆಯ ಪ್ರಾಂಶುಪಾಲ ಜಿ.ಲೋಕೇಶ್ ಅವರನ್ನು ಕ್ರಮವಾಗಿ ಕುಣಿಗಲ್ ತಾಲೂಕಿನ ಮಲ್ಲನಾಯಕನಹಳ್ಳಿ, ಪಾವಗಡ ತಾಲೂಕಿನ ಕೊಡಿಗೆಹಳ್ಳಿಯ ಮುರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಆದೇಶ ಸಂಖ್ಯೆ ಸಕಇ 146 ಎಂಡಿಎಸ್ 2025 ಅನ್ವಯ ವರ್ಗಾಯಿಸಲಾಗಿತ್ತು.ಸದರಿ ಪ್ರಾಂಶುಪಾಲರ ಕಾರ್ಯಕ್ಷಮತೆ, ಶಾಲಾ ಅಭಿವೃದ್ಧಿಯಲ್ಲಿ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ನೀಡಿದ ಫಲಿತಾಂಶ ಪರಿಗಣಿಸಿ ಅವರ ಸೇವೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ವಸತಿ ಶಾಲೆಗಳಿಗೆ ಬಳಸಿಕೊಳ್ಳಲು ಶಾಸಕ ಸಿ.ಬಿ.ಸುರೇಶ್ ಬಾಬು ಅವರು ತೀಮಾರ್ನಿಸಿದರು. ಅವರ ವರ್ಗಾವಣೆ ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಜೂ.30ರಂದು ಸಂಖ್ಯೆ 146 ಎಂಡಿಎಸ್ 2025ರ ಅನ್ವಯ ಆದೇಶವನ್ನು ಹೊರಡಿಸಿ ಹಳೇ ಆದೇಶ ರದ್ದುಪಡಿಸಿದ್ದಾರೆ. ಇದರಿಂದ ಶಾಲೆಯ ಮಕ್ಕಳ ಪಾಲಕರು ಹಾಗೂ ವಿದ್ಯಾರ್ಥಿಗಳಿಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್ ಅವರು ಮೊದಲು ಕಾರ್ಯನಿರ್ವಹಿಸಿದ ವಸತಿ ಶಾಲೆಗಳಲ್ಲೇ ಪ್ರಾಂಶುಪಾಲರಾಗಿ ಮುಂದುವರಿಯಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.