ಮೈಸೂರು: ನವಿರಾಗಿ ಮನಕ್ಕೆ ಮುದ ನೀಡುವಂತೆ ನಮ್ಮ ಹಿಂದಿನ ಕವಿಗಳು ಬರೆಯುತ್ತಿದ್ದ ಪ್ರೇಮಕವಿತೆಗಳು ಇಂದಿನ ದಿನಗಳಲ್ಲಿ ವಿರಳವಾಗಿವೆ ಎಂದು ಹಿರಿಯ ಸಾಹಿತಿ ಪ್ರೊ.ರಾಮೇಗೌಡ (ರಾಗೌ) ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಂುುಕ್ತ ಪ್ರಕಾಶನದಿಂದ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಬಿ. ವೆಂಕಟೇಶ್ ಅವರು ರಚಿಸಿರುವ ‘ಮಕ್ಕಳಿಬ್ಬರ ದೃಷ್ಟಿಂುಲ್ಲಿ ಕುವೆಂಪು’, ‘ನಾನು ರಸ್ತೆ ಬದಿಂು ಮರ’ ಮತ್ತು ಪ್ರೊ.ಎಸ್.ಬಿ.ತೇಜ ಅವರು ರಚಿಸಿರುವ ‘ಕೊಡವರ ಸಾಂಸ್ಕೃತಿಕ ಲೋಕ’ ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
20ನೇ ಶತವಾನದಲ್ಲಿ ಹಲವಾರು ಕವಿಗಳು, ಕವಯಿತ್ರಿಂುರು ಪ್ರೇಮಕಾವ್ಯಗಳ ರಚನೆಂುಲ್ಲಿ ತೊಡಗುತ್ತಿದ್ದರು. ಸಾಕಷ್ಟು ಕವಿತೆಗಳು ನವಿರಾಗಿ ಮನಕ್ಕೆ ಮುದ ನೀಡುವಂತೆ ಇರುತ್ತಿದ್ದವು. ಆದರೆ ಇಂದಿನ ಂುುವ ಕವಿಗಳು ಈ ಬಗ್ಗೆ ಚಿಂತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಧುನಿಕತೆ ಹೆಸರಿನಲ್ಲಿ ಸಾಹಿತ್ಯದತ್ತ ಒಲವು ಕಡಿಮೆ ಅಗುತ್ತಿದೆ. ಮಾಹಿತಿ, ತಂತ್ರಜ್ಞಾನದತ್ತ ಎಲ್ಲರ ಗಮನ ಕೇಂದ್ರೀಕರಿಸುತ್ತಿದ್ದು, ಸಾಹಿತ್ಯ, ಬರಹದ ಕಡೆ ಆಕರ್ಷಣೆ ಕಳೆದುಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೆಂಕಟೇಶ್ ಅವರು ನವಿರಾಗಿ ಕುತೂಹಲ ಹುಟ್ಟಿಸುವ ರೀತಿಂುಲ್ಲಿ ಕವನ ಸಂಕಲನ ರಚಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
‘ಮಕ್ಕಳಿಬ್ಬರ ದೃಷ್ಟಿಂುಲ್ಲಿ ಕುವೆಂಪು’ ಕೃತಿಯಲ್ಲಿ ಕುವೆಂಪು ಅವರ ಮಕ್ಕಳಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಧಾರಿಣಿ ಅವರು ಕುವೆಂಪು ಅವರ ಬಗ್ಗೆ ಹೊಂದಿದ್ದ ಸೂಕ್ಷ್ಮ ವಿವೇಚನೆಗಳನ್ನು ವಿಶ್ಲೇಷಿಸಿ, ಕುವೆಂಪು ಅವರ ಕೃತಿಗಳಲ್ಲಿ ಬರುವ ಲಂುಗಳನ್ನು ಕಟ್ಟಿಕೊಡಲು ಪ್ರಾವಾಣಿಕ ಪ್ರಂುತ್ನವನ್ನು ಇಲ್ಲಿ ಮಾಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಎಸ್.ಬಿ.ತೇಜ ಅವರು ರಚಿಸಿರುವ ಕೊಡವರ ಸಾಂಸ್ಕೃತಿಕ ಲೋಕ ಕೃತಿಂುಲ್ಲಿ ಕೊಡವರ ಆಚಾರ, ವಿಚಾರ, ಪರಂಪರೆ ಬಗ್ಗೆ ಸಾಕಷ್ಟು ವಾಹಿತಿಂುನ್ನು ಒದಗಿಸಿದ್ದಾರೆ ಎಂದು ಪ್ರಶಂಸಿಸಿದರು.
ಭಾರತೀ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಮ.ರಾಮಕೃಷ್ಣ ಅವರು ಕೃತಿ ಕುರಿತು ವಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ವಿದ್ಯಾಶ್ರಮ ಕಾಲೇಜಿನ ಪ್ರಾಂಶುಪಾಲರಾದ ಎ.ಎಂ.ಖುಷಿ, ಪ್ರಾಧ್ಯಾಪಕ ಬಿ.ಎಸ್.ಸುಬ್ರಹ್ಮಣ್ಯ, ಲೇಖಕ ಸತೀಶ್ ಜವರೇಗೌಡ, ಪ್ರಕಾಶಕರಾದ ಓಂಕಾರಪ್ಪ, ಲೇಖಕರಾದ ಪ್ರೊ.ಕೆ.ಬಿ.ವೆಂಕಟೇಶ್, ಪ್ರೊ.ಎಸ್.ಬಿ.ತೇಜ ಇತರರು ಇತರರು ಇದ್ದರು.