ಜಿಲ್ಲೆ

ಪ್ರಸಿದ್ಧ ರ‍್ಯಾಪರನ್ನು ವೇದಿಕೆಯಲ್ಲಿ ತಳ್ಳಿದ ಅಭಿಮಾನಿ

ವಿಜಯವಾಣಿ ಸುದ್ದಿಜಾಲ ಕಾರವಾರ
ಇಲ್ಲಿನ ಟ್ಯಾಗೋರ್ ಕಡಲ ತೀರದ ಮಯೂರವರ್ಮ ವೇದಿಕೆಯಲ್ಲಿ ಆಯೋಜನೆಯಾಗಿರುವ ಕರುನಾಡ ಕರಾವಳಿ ಉತ್ಸವದಲ್ಲಿ ಶನಿವಾರ ರಾತ್ರಿ ಪ್ರಸಿದ್ಧ ರ‍್ಯಾಪರ್ ಅಲೋಕ್ ಬಾಬು (ಆಲ್ ಒಕೆ) ಅವರ ಹಾಡಿಗೆ ಯುವಜನ ಕುಣಿದು ಕುಪ್ಪಳಿಸಿದರು.
ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು ಒಂದು ಹಂತದಲ್ಲಿ ವೇದಿಕೆಯ ಮೇಲೂ ಬಂದು ಡಾನ್ಸ್ ಮಾಡಿದರು. ವೇದಿಕೆಯ ಮೇಲೆ ಬಂದು ಕುಣಿಯುತ್ತಿದ್ದ ಅಭಿಮಾನಿಯೊಬ್ಬ ಪೊಲೀಸರ ಬೆತ್ತದೇಟಿನ ಭಯದಲ್ಲಿ ಅಲೋಕ ಬಾಬು ಅವರನ್ನೇ ನೂಕಿದ ಘಟನೆಯೂ ನಡೆಯಿತು. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಅಲೋಕ ಬಾಬು ಅವರು ವೇದಿಕೆಯ ತುದಿಗೆ ಹೋಗಿ ಬಿದ್ದರು. ಆದರೂ ಸುಧಾರಿಸಿಕೊಂಡು ಹಾಡನ್ನು ಮುಂದುವರಿಸಿದರು. ಕಾರವಾರದ ಅಭಿಮಾನಿಗಳ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.