ಚಿತ್ರದುರ್ಗ: ಗಣೇಶೋತ್ಸವದ ಅಂಗವಾಗಿ ಆನೆಬಾಗಿಲು ಸಮೀಪವಿರುವ ಆಂಜನೇಯಸ್ವಾಮಿ ದೇಗುಲ ಆವರಣದಲ್ಲಿ ಪ್ರತಿಷ್ಠಾಪಿಸಿಲಿರುವ 66ನೇ ವರ್ಷದ ಪ್ರಸನ್ನ ಗಣಪತಿ ಮೂರ್ತಿಗೆ ಸೆ. 28 ರವರೆಗೂ ನಿತ್ಯ ಬೆಳಿಗ್ಗೆ 11.30ರಿಂದ ನವಗ್ರಹ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ, ಮಹಾಮಂಗಳಾರತಿ ನಂತರ ತೀರ್ಥ, ಪ್ರಸಾದ ವಿತರಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಮೋಘ ಮಲ್ನಾಡ್ ಸಿಂಗರ್ ಖ್ಯಾತಿಯ ರಾಜಶೇಖರ್ ಜಿ.ಕಾರೆಕರ್ ಮತ್ತು ರಾಜ್ ಮ್ಯೂಸಿಕ್ ಶಿವಮೊಗ್ಗ ತಂಡದಿಂದ ಬುಧವಾರ ಸಂಗೀತ ಸಂಜೆ ನಡೆಯಿತು.
21ರಂದು ಬಿಗ್‌ಬಾಸ್ ಖ್ಯಾತಿಯ ಸುಮಾ ರಾಜ್‌ಕುಮಾರ್ ಅವರಿಂದ ಹಾಸ್ಯಮಯ ಮ್ಯಾಜಿಕ್ ಶೋ, ಮಾತನಾಡುವ ಗೊಂಬೆ ಪ್ರದರ್ಶನ, 22ಕ್ಕೆ ಚಿತ್ರದುರ್ಗದ ಶಾರದಾ ಮೆಲೋಡಿಸ್ ತಂಡದಿಂದ ಚಲನಚಿತ್ರ ಗೀತೆಗಳ ಗಾಯನ ನಡೆಯಲಿದೆ.
23ರಂದು ಲಾಸಿಕಾ ಫೌಂಡೇಶನ್‌ನ ವಿದೂಷಿ ಶ್ವೇತಾ ಮಂಜುನಾಥ್ ಮತ್ತು ತಂಡದಿಂದ ನೃತ್ಯ ಸಂಭ್ರಮ, 24ಕ್ಕೆ ಬೆಂಗಳೂರಿನ ದೀಪಿಕಾ ಶ್ರೀಕಾಂತ್ ಮತ್ತು ತಂಡದಿಂದ ಗಾನ ಸಂಭ್ರಮ, 25ಕ್ಕೆ ಗಾಯಕಿ ಡಾ.ಎಲ್.ಒ.ಕೆ.ಪದ್ಮಿನಿ ಮತ್ತು ತಂಡದಿಂದ ಭಕ್ತಿ ಸಿಂಚನ ಹಾಗೂ ಭಾವ ಸಿಂಚನ ಸಂಗೀತ ಸಂಜೆ ಆಯೋಜಿಸಲಾಗಿದೆ.
26ರಂದು ತೀರ್ಥಹಳ್ಳಿಯ ಕೆ.ಜಿ.ಶಿವಕುಮಾರ್ ಕಾರಂತ್‌ರಿಂದ ಗಾನಾಂಜಲಿ ಸುಗಮ ಸಂಗೀತ, ಭಕ್ತಿಗೀತೆ, ಹಳೆ ಚಿತ್ರಗೀತೆಗಳ ಗಾಯನ, 27ಕ್ಕೆ ನಾಟ್ಯರಂಜನಿ ನೃತ್ಯ ಕಲಾಕೇಂದ್ರದ ಜಿ.ಕಿರಣ್ ಮತ್ತು ಕಲಾತಂಡದಿಂದ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ ಸಂಗಮ ನಡೆಯಲಿದೆ.
28ರಂದು ಗುರುವಾರ ಸಂಜೆ 6ರ ನಂತರ ಸ್ವಾಮಿಗೆ ಮಹಾಮಂಗಳಾರತಿ ನೆರವೇರಿದ ಬಳಿಕ ವಿದ್ಯುತ್ ದೀಪಗಳಿಂದ ಅಲಂಕರಿಸಿರುವ ರಥದಲ್ಲಿ ಸಕಲ ಮಂಗಳ ವಾದ್ಯದೊಂದಿಗೆ ನಗರದ ರಾಜ ಬೀದಿಗಳಲ್ಲಿ ಮೆರವಣಿಗೆ, ನಂತರ ಚಂದ್ರವಳ್ಳಿ ಸಮೀಪದ ಬಾವಿಯಲ್ಲಿ ವಿಸರ್ಜನೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಪ್ರಸನ್ನ ಗಣಪತಿ ಸೇವಾ ಸಮಿತಿಯ ಉಪಾಧ್ಯಕ್ಷ ನಾಗರಾಜ್ ಬೇದ್ರೆ ಮನವಿ ಮಾಡಿದ್ದಾರೆ.