ಚಿಕ್ಕಮಗಳೂರು: ಸಹಕಾರಿ ರಂಗದಲ್ಲಿ ಸಾಲ ಪಡೆದ ಸದಸ್ಯರು ನಿಗಧಿತ ಸಮಯಕ್ಕೆ ಮರುಪಾವತಿಸಿದರೆ ಸಂಘವು ಆರ್ಥಿಕ ಪ್ರಗತಿ ಹೊಂದಿ ಉಳಿದ ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸಬಹುದು ಎಂದು ತಿರುವಳ್ಳವರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಶಂಕರ್‌ಕುಮಾರ್ ತಿಳಿಸಿದರು.
ನಗರದ ಎಂ.ಜಿ.ರಸ್ತೆಯ ಟೌನ್‌ಕೋ ಸಭಾಂಗಣದಲ್ಲಿ ತಿರುವಳ್ಳವರ್ ಪತ್ತಿನ ಸಹಕಾರ ಸಂಘದ ೨೦ ೨೪-೨೫ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನೇಕ ಸಹಕಾರಿ ಕ್ಷೇತ್ರದ ಸವಾಲುಗಳ ನಡುವೆಯು ತಿರುವಳ್ಳರ್ ಸಂಘ ಕಳೆದ ೧೩ ವರ್ಷಗಳಿಂದ ಸದೃಢವಾಗಿ ನಿಂತಿದೆ. ಜಿಲ್ಲೆಯಲ್ಲೇ ಅತ್ಯಂತ ಮಾದರಿ ಸಂಘದ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಣ್ಣ ಸಂಘವಾದರೂ ತಮಿಳು ಜನಾಂಗದ ಕಟ್ಟಕಡೆಯ ವ್ಯಕ್ತಿಗೆ ಸ್ವಾವಲಂಬಿ ಬದುಕು ರೂಪಿಸುವುದೇ ಧ್ಯೇಯೋz್ದೆÃಶವಾಗಿದೆ ಎಂದರು.
ಪ್ರಸ್ತುತ ಸಂಘದಲ್ಲಿ ೧,೩೮೦ ಸದಸ್ಯರುಗಳ ಸಂಖ್ಯೆಬಲವಿದೆ. ಐದು ಸಾವಿರದಿಂದ ಐದು ಲಕ್ಷ ದವರೆಗೆ ಕಡಿಮೆ ಬಡ್ಡಿದರದಲ್ಲಿ ಜನಾಂಗಕ್ಕೆÀ ಸಾಲಸೌಲಭ್ಯ ನೀಡುತ್ತಿದೆ. ಜೊತೆಗೆ ಆರ್.ಡಿ.ಖಾತೆ, ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳ ಖರೀದಿಗೂ ಸಾಲವನ್ನು ವಿತರಿಸಿ ಜನಾಂಗದ ಆರ್ಥಿಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಸಂಘವು ೩೭.೫೭ ಲಕ್ಷ ರೂ.ಗಳ ಸಾಲಸೌಲಭ್ಯ ಕಲ್ಪಿಸುವ ಜೊತೆಗೆ ೧೦ ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದೆ. ಅಲ್ಲದೇ ಠೇವಣಿ ಇರಿಸಿದ ಸದಸ್ಯ ಬಂಧುಗಳಿಗೆ ಶೇ. ೧೦ ಹಾಗೂ ಹಿರಿಯ ನಾಗರೀಕರಿಗೆ ಶೇ. ೧೦.೫ರಷ್ಟು ಬಡ್ಡಿಯನ್ನು ನೀಡಲಾಗುವ ಮೂಲಕ ತಾಲೂಕಿನಲ್ಲಿ ತಮಿಳು ಜನಾಂಗದವರಿಗೆ ಆಸರೆಯಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಕೆ.ಕೃಷ್ಣರಾಜ್ ಮಾತನಾಡಿ, ಸದಸ್ಯರ ಆರೋಗ್ಯ ದೃಷ್ಟಿಯಿಂದ ಯಶಸ್ವಿನಿ ಕಾರ್ಡ್ನ್ನು ಮಾಡಿಸಲಾಗಿದೆ. ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಆಡಳಿತ ಮಂಡಳಿ ಶ್ರಮಿಸುತ್ತಿರುವ ಕಾರಣ ಸದಸ್ಯ ಬಂಧುಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಿ.ಚಿನ್ನಪ್ಪ, ಜಿ.ರಮೇಶ್, ಸುಶೀಲ್‌ದಾಸ್, ಪಿ.ಲೋಕೇಶ್, ಎ.ಲಕ್ಷ್ಮೀನಾರಾಯಣ್, ಪಿ.ಗೋಪಿನಾಥ್, ಡಿ.ಮಧು, ಸಿ.ಎಸ್.ಮಂಜುನಾಥ್, ಎಸ್.ಸರವಣಕುಮಾರ್, ಆರ್.ಪದ್ಮಾ, ಅನೀಸಾ ಬೆನೆಜರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಸಂದೀಪ್‌ಕುಮಾರ್ ಉಪಸ್ಥಿತರರಿದ್ದರು.