ಬಾಗಲಕೋಟೆ: ರೈತರು ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಗುಣಮಟ್ಟದ ಕಬ್ಬು ಪೂರೈಸಿ ಕಾರ್ಖಾನೆ ಅಭಿವೃದ್ಧಿ ಮತ್ತು ಉತ್ಪಾದನೆ ಪ್ರಗತಿಯಲ್ಲಿ ಸಹಕಾರ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ೬ ಲಕ್ಷ ಟನ್ ಕಬ್ಬು ನೂರಿಸುವ ಗುರಿ ಹೊಂದಲಾಗಿದೆ ಎಂದು ಮಾಜಿ ಸಚಿವ, ಬೀಳಗಿ ಶುರ‍್ಸ್ ಮಿಲ್ ಲಿ. ಯುನಿಟ್-೨ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಮುಧೋಳ ತಾಲೂಕಿನ ತಿಮ್ಮಾಪುರ (ರನ್ನನಗರ) ಗ್ರಾಮದಲ್ಲಿ ಭಾನುವಾರ ಬೀಳಗಿ ಶುಗರ್ ಮಿಲ್ ಲಿ. ಯುನಿಟ್-೨ ರ ೨೦೨೫-೨೬ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕೇನ್ ಕ್ಯಾರಿಯನ್ ಪೂಜಾ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಂದ್ ಆಗಿದ್ದ ಈ ಕಾರ್ಖಾನೆ ಪುನರ ಆರಂಭಿಸಿ ಅಭಿವೃದ್ಧಿ ಪಥದತ್ತ ಕೊಂಡು ಒಯ್ಯಲು ಷೇರುದಾರರ, ರೈತರ, ಕಬ್ಬು ಪೂರೈಕೆದಾರರ, ಕಾರ್ಮಿಕರ, ಸಹಕಾರ ಅತ್ಯಗತ್ಯವಾಗಿದೆ ಎಂದರು.
ನಿಮ್ಮ ವಿಶ್ವಾಸ ಮತ್ತು ನಂಬಿಕೆಗೆ ಚ್ಯುತಿ ಬರದ ಹಾಗೆ ಕೆಲಸ ಮಾಡಿ ಕಬ್ಬು ಪೂರೈಕೆದಾರರ ಮತ್ತು ಕಾರ್ಮಿಕರ ಹಿತರಕ್ಷಣೆ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ನಮ್ಮ ಜಿಲ್ಲೆಯಲ್ಲೇ ಆದರ್ಶ ಸಕ್ಕರೆ ಕಾರ್ಖಾನೆಯನ್ನಾಗಿ ಮಾಡಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ತಿಳಿಸಿ, ಜಿಲ್ಲೆಯಲ್ಲಿ ಬೇರೆ ಸಕ್ಕರೆ ಕಾರ್ಖಾನೆಯವರು ನೀಡುವ ದರವನ್ನೇ ನಮ್ಮ ಸಕ್ಕರೆ ಕಾರ್ಖಾನೆ ನೀಡುತ್ತದೆ ಎಂದು ಭರವಸೆ ನೀಡಿದರು.
ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಬೀಳಗಿ ಶುರ‍್ಸ್ ಕಾರ್ಖಾನೆ ಈ ಭಾಗದ ಎಲ್ಲ ರೈತರಿಗೆ ಕಾಮಧೇನು ಕಲ್ಪವೃಕ್ಷದಂತೆ ಇರುತ್ತದೆ. ಬರುವ ದಿನಗಳಲ್ಲಿ ಈ ಭಾಗದ ರೈತರು ತಮ್ಮ ಬೆಳೆದ ಕಬ್ಬನ್ನು ಕಾರ್ಖಾನೆಗೆ ಕಳಿಸಲು ಮನವಿ ಮಾಡಿಕೊಂಡು, ಕಾರ್ಖಾನೆ ಉಳಿದರೆ ಕಬ್ಬು ಬೆಳೆಗಾರರು, ಕಾರ್ಮಿಕರು, ಷೇರುದಾರರು, ರೈತರು ನಾವೆಲ್ಲರೂ ಉಳಿಯುತ್ತೇವೆ ಎಂದು ತಿಳಿಸಿದರು.
ಕಾರ್ಖಾನೆಗೆ ಮಾಜಿ ನಿರ್ದೇಶಕ ದಯಾನಂದ ಪಾಟೀಲ ಮಾತನಾಡಿ, ಕಾರ್ಖಾನೆ ಬೆಳೆಯಲು ಈ ಭಾಗದಲ್ಲಿ ರೈತರು ಹಾಗೂ ಷೇರು ಸದಸ್ಯರು ರೈತರು ಮತ್ತು ಕಾರ್ಮಿಕರು ಮನಸ್ಸು ಪ್ರಜ್ವಲ ಮಾಡಿಕೊಂಡು ದುಡಿಯಬೇಕು ಹಾಗೂ ದುಡಿದ ಹಣದಲ್ಲಿ ತಾವು ಬದುಕಿಗಾಗಿ ಒಳ್ಳೆಯದಕ್ಕಾಗಿ ಹಣ ಬಳಿಕೆ ಮಾಡಿಕೊಳ್ಳಬೇಕು. ಈಗಾಗಲೇ ನಾವು ಅನೇಕ ತೊಂದರೆಗಳನ್ನು ಅನುಭವಿಸಿರುತ್ತೇವೆ. ಬರುವ ದಿನಗಳಲ್ಲಿ ಯಾವುದು ತೊಂದರೆ ಆಗದ ಹಾಗೆ ನಡೆದುಕೊಳ್ಳುತ್ತೇವೆ. ಈ ವರ್ಷ ಬೆಳೆದ ಕಬ್ಬನ್ನು ನಮ್ಮ ಕಾರ್ಖಾನೆಗೆ ಕಳುಹಿಸಿ. ಈಗಾಗಲೇ ಕೊಟ್ಟ ಹಾಗೆ ಕಬ್ಬಿಗೆ ಒಳ್ಳೆಯ ದರ ರೈತರಿಗೆ ಕೊಡುವ ಭರವಸೆ ಎಸ್.ಆರ್ ಪಾಟೀಲ ಅವರು ನೀಡಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ವಕೀಲರಾದ ಆರ್.ಎಂ.ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಬಿಡಿಸಿಸಿ ಬ್ಯಾಂಕ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆ.ಆರ್.ಮಾಚಪ್ಪನವರ, ಮಂಜುನಾಥ ಅರಳಿಕಟ್ಟಿ ಮಾತನಾಡಿದರು. ಈ ವೇಳೆ ನಿರ್ದೇಶಕರಾದ ಎಚ್.ಎಲ್.ಪಾಟೀಲ, ಸುರೇಶಗೌಡ ಪಾಟೀಲ, ರಾಹುಲ ನಾಡಗೌಡ, ಮಂಜುನಾಥ ಅರಳಿಕಟ್ಟಿ, ಲಕ್ಷ÷್ಮಣ ನಿರಾಣಿ, ಮುಖಂಡರಾದ ಸತೀಶ ಬಂಡಿವಡ್ಡರ, ಅರುಣ ಕಾರಜೋಳ, ಉದಯ ಸಾರವಾಡ, ವೆಂಕಣ್ಣ ಗಿಡ್ಡಪ್ಪನವರ, ರಾಜುಗೌಡ ಪಾಟೀಲ, ಸಂಗನಗೌಡ ಕಾತರಕಿ, ವಿಠ್ಠಲ ತುಮ್ಮರಮಟ್ಟಿ, ಶ್ರೀಕಾಂತ ಗುಜ್ಜನ್ನವರ, ವಕೀಲ ಬಸವರಾಜ ಚಿಕ್ಕೂರ, ಲೋಕಣ್ಣ ಕತ್ತಿ, ತಮ್ಮಣ್ಣಪ್ಪ ಅರಳಿಕಟ್ಟಿ, ರಾಜು ಹಲಗತ್ತಿ, ಪಾಂಡುರAಗ ಹೊವನ್ನವರ, ಕಾರ್ಖಾನೆಯ ಆಡಳಿತಾಽಕಾರಿ ದಾನಯ್ಯ ಹಿರೇಮಠ, ಕಾರ್ಮಿಕ ಯುನಿಯನ್ ಸಂಘದ ಅಧ್ಯಕ್ಷ ಉಮೇಶ ಬಡಿಗೇರ, ಉಪಾಧ್ಯಕ್ಷ ನಾಗಪ್ಪ ಕೆಳಗಡೆ, ಕಾರ್ಯದರ್ಶಿ ಪ್ರಕಾಶ ಕಬ್ಬೂರ, ಖಜಾಂಜಿ ಪಾಂಡು ಮುಳ್ಳೂರ, ಕಾಳಪ್ಪ ಕಂಬಾರ ಇದ್ದರು.