ಜಿಲ್ಲೆ

ಪ್ರಸಂಗ ಬಂದರೆ ಸಿಎಂ ಸ್ಥಾನಕ್ಕೆ ನಾನೂ ಸ್ಪರ್ಧಿ

ದಾವಣಗೆರೆ : ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ, ಹೈಕಮಾಂಡ್ ಆಶೀರ್ವಾದ ಇರುವ ವರೆಗೂ ಅವರೇ ಇರಲಿ. ಅಂಥ ಪ್ರಸಂಗ ಬಂದರೆ ಸಿಎಂ ಸ್ಥಾನಕ್ಕೆ ನಾನೂ ಸ್ಪರ್ಧೆ ಮಾಡುತ್ತೇನೆ, ಬಿಡುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ   ಹೇಳಿದರು.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಜೂನಿಯರ್, ಸೀನಿಯರ್ ಪ್ರಶ್ನೆ ಬರುವುದಿಲ್ಲ. ಶಾಸಕರು ಬಹುಮತದ ಬೆಂಬಲ ನೀಡಿದವರನ್ನು ಹೈಕಮಾಂಡ್ ಒಪ್ಪುತ್ತದೆ ಎಂದು ತಿಳಿಸಿದರು.  ಕೆಲವರು ಬಾಯಿಗೆ ಬಂದಂತೆ ಮಾತನಾಡಿಕೊಂಡು ಹೋಗುವುದರಿಂದ ಪ್ರಯೋಜನವಿಲ್ಲ. ಆ ಮಾತಿಗೆ ತೂಕ ಇರುವುದಿಲ್ಲ ಎಂದು ಹೇಳಿದರು.