ಜಿಲ್ಲೆ

ಪ್ರಶ್ನೆ ಕೇಳುವ ಹವ್ಯಾಸ ರೂಢಿಸಿಕೊಳ್ಳಬೇಕು

ನಿಪ್ಪಾಣಿ: ಮಹತ್ವಾಕಾಂಕ್ಷಿಯುಳ್ಳ ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಅಂದುಕೊಂಡ ಗುರಿ ಮುಟ್ಟುತ್ತಾರೆ. ಗುರುಗಳಿಗೆ ಪ್ರಶ್ನೆ ಕೇಳುವ ಅಭ್ಯಾಸ ರೂಢಿಸಿಕೊಂಡವರು ಯಶಸ್ಸು ಪಡೆಯುತ್ತಾರೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಸ್ಥಳೀಯ ವಿಎಸ್‌ಎಂ ಸೋಮಶೇಖರ ಕೋಠಿವಾಲೆ ಪಾಲಿಟೆಕ್ನಿಕ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಗಮನ ೨೦೨೫ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಕಾಪಾಡಿಕೊಂಡು ಆದರ್ಶ ಪಾಲಿಸಬೇಕು ಎಂದರು.

ಇನ್ನೋವೇಷನ್ ಮಾರ್ಕ್ ಟೆಕ್ ಕಂಪನಿ ಸಿಇಒ ಪಾಂಡುರಂಗ ಜಿತಕರ ಮಾತನಾಡಿ, ಮೊಬೈಲ್ ಉತ್ಪಾದಕರು ಕೋಟ್ಯಧಿಪತಿಯಾದರೆ ಬಳಕೆದಾರರು ಸಮಯ ವ್ಯಯ ಮಾಡುತ್ತಿದ್ದು, ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದರು.

ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ, ಸಿಇಒ ಡಾ. ಸಿದ್ಧಗೌಡ ಪಾಟೀಲ, ಬಿಇ ಪ್ರಾಚಾರ್ಯ ಡಾ. ಉಮೇಶ ಪಾಟೀಲ, ಪ್ರಾಚಾರ್ಯ ಬಸವರಾಜ ಕರೋಶಿ ಮಾತನಾಡಿದರು.

ಪ್ರತಿಯೊಂದು ಸೆಮಿಸ್ಟರ್‌ನ ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಕೆ ಮತ್ತು ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

ಮಂಡಳದ ಕಾರ್ಯದರ್ಶಿ ಸಮೀರ ಬಾಗೇವಾಡಿ, ಹಿರಿಯ ಸಂಚಾಲಕ ಸಂಜಯ ಮೊಳವಾಡೆ, ಸಚಿನ ಹಾಲಪ್ಪನವರ, ಪ್ರೊ. ಗಾಯತ್ರಿ ಬನ್ನೆ, ರೋಹನ ಸುಬ್ಬನ್ನವರ, ಪ್ರೊ. ಪ್ರವೀಣ ಪರಮಕರ, ಶುಭಾಂಗಿ ಲೋಹಾರ, ರಾಹಿನ್ ಕಮತೆ, ಸ್ವಾತಿ ನೂಲಿ, ಎಲ್ಲ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಇತರರಿದ್ದರು.