ಜಿಲ್ಲೆ

ಪ್ರೊ.ಕೆ.ರಾಮದಾಸ್ ನೆನಪಿನಲ್ಲಿ ಪ್ರಶಸ್ತಿಗಾಗಿ ಲೇಖನ ಸ್ಪರ್ಧೆ

ಮೈಸೂರು: ಪ್ರಗತಿಪರ ಚಿಂತಕ ದಿ.ಪ್ರೊ.ಕೆ.ರಾಮದಾಸ್ ಅವರ ನೆನಪಿನಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಪ್ರಶಸ್ತಿಗಾಗಿ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ. ಅಂತರ ಜಾತಿ ವಿವಾಹಗಳು ಸಾಮಾಜಿಕ ಬದಲಾವಣೆಯಲ್ಲಿ ಎಷ್ಟು ಪೂರಕ ಮತ್ತು ಪ್ರೇಕರ ಎಂಬ ವಿಚಯ ಕುರಿತು ಪ್ರಗತಿಪರ ಆಲೋಚನೆ, ವಾಸ್ತವತೆಯ ಲೇಖನಗಳನ್ನು ನಾಲ್ಕು ಪುಟಕ್ಕೆ ಮೀರದಂತೆ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದು ಕಳುಹಿಸಬಹುದು. ಮೂರು ಲೇಖನಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು.
ಲೇಖಲನಗಳನ್ನು ಜೂ.13ರ ಒಳಗೆ ಅಧ್ಯಕ್ಷರು, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್, ಅನುದಿನ ನಿಲಯ, ಇಡಬ್ಲೂೃಎಸ್ -155, 10ನೇ ಕ್ರಾಸ್, ಗಂಗೋತ್ರಿ ಬಡಾವಣೆ, ಮೈಸೂರು-09. ಇಲ್ಲಿಗೆ ಕಳುಹಿಸಬೇಕು. ಮಾಹಿತಿಗೆ ಮೊಬೈಲ್ ಸಂಖ್ಯೆ 7019441509 ಅನ್ನು ಸಂಪರ್ಕಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ.