ಜಿಲ್ಲೆ

ಪ್ರವೇಶಾತಿ ದಿನಾಂಕ ವಿಸ್ತರಣೆ

ಬಳ್ಳಾರಿ : ಇಲ್ಲಿನ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ 5 ವರ್ಷ ಬಿಎ, ಎಲ್‌ಎಲ್‌ಬಿ ( ಇಂಟಿಗ್ರೇಟೆಡ್) ಪದವಿಯನ್ನು ಪ್ರಸ್ತಕ ಸಾಲಿನಲ್ಲಿ ಪ್ರಾರಂಭಿಸಲಾಗಿದೆ. ಪಿಯುಸಿ ನಂತರದ ಐದು ವರ್ಷದ ಬಿಎ ಎಲ್‌ಎಲ್‌ಬಿ ಪದವಿಯ ಪ್ರವೇಶಾತಿಯು ಈಗಾಗಲೇ ಪ್ರಾರಂಭವಾಗಿದ್ದು, 25- 09- 24 ರವರೆಗೆ ಪ್ರವೇಶ ಪಡೆಯಲು ದಿನಾಂಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ಪಿಯುಸಿ, ಡಿಪ್ಲೋಮಾ, ಜೆಒಸಿ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಪ್ರಾಂಶುಪಾಲ ಡಾ. ಕೆ. ರಜನಿ ಕುಮಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಮಾಹಿತಿಗಾಗಿ 9591819333, 9353584511 ಸಂಪರ್ಕಿಸಬಹುದು.