ಜಿಲ್ಲೆ

ಪ್ರವಾಹ ಸ್ಥಿತಿ ಎದುರಿಸಲು ಸಿದ್ಧರಾಗಿ

Yadgiri - Laxmikanth Kulkarni

ಯಾದಗಿರಿ: ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಕೂಡ ಅಕಾರಿಗಳು ನಿಶ್ಚಿಂತೆಯಿಂದ ಇರದೆ ಅವಶ್ಯಕ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಮನೋಜ್ ಜೈನ್ ಸೂಚನೆ ನೀಡಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಕರೆದಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಈ ಹಿಂದೆ ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಸಮಗ್ರ ಮಾಹಿತಿ ಇಟ್ಟುಕೊಳ್ಳಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಆರೋಗ್ಯ ಸಂಬಂತ ಸೇವೆಗಳು, ಹಿರಿಯ ನಾಗರಿಕರು, ಮಹಿಳೆಯರು , ಮಕ್ಕಳು ಮತ್ತು ಗಭರ್ಿಣಿಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮಹಾರಾಷ್ಟ್ರದಲ್ಲಿ ಆಗುವ ಹೆಚ್ಚಿನ ಮಳೆ ಆಧಾರದ ಮೇಲೆ ಆಲಮಟ್ಟಿ, ನಾರಾಯಣಪುರ ಸೇರಿ ವಿವಿಧ ಜಲಾಶಯಗಳಿಂದ ಬಿಡುಗಡೆಯಾಗುವ ನೀರಿನ ಪ್ರಮಾಣದ ಬಗ್ಗೆ ಸೂಕ್ತ ನಿಗಾ ಇಡಿ. ಭೀಮಾ ಮತ್ತು ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೋಡಲ್ ಅಕಾರಿಗಳು ಸೂಕ್ತ ಜಾಗೃತಿಯನ್ನು ವಹಿಸಿಕೊಳ್ಳಬೇಕು. ಆಯಾ ಅಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಂಬಂಸಿದ ಗ್ರಾಮಸ್ಥರೊಂದಿಗೆ, ಪಿಡಿಒ ಹಾಗೂ ಗ್ರಾಮ ಲೆಕ್ಕಿಗರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ವಿಶೇಷವಾಗಿ ನೀಲಕಂಠರಾಯನ ಗಡ್ಡಿ ಕುರಿತು ಹಾಗೂ ಮುಂದೆ ಪ್ರವಾಹ ಬಂದಲ್ಲಿ ಸ್ಥಾಪಿಸಬಹುದಾದ ಕಾಳಜಿ ಕೇಂದ್ರಗಳ ಬಗ್ಗೆ ಸಿದ್ದತೆಯಲ್ಲಿ ಇರಬೇಕು.ಎಂದು ತಿಳಿಸಿದರು.