ಗೋಕಾಕ: ಟಪ್ರಭಾ ನದಿ ಪ್ರವಾಹದಲ್ಲಿ ಮೃತಪಟ್ಟ ತಾಲೂಕಿನ ಹಡಗಿನಾಳ ಗ್ರಾಮದ ಮುತ್ತೆಪ್ಪ ಶಿವನಾಯಿಕ ನಾಯಿಕ ಅವರ ಕುಟುಂಬಕ್ಕೆ ನಗರದ ಶಾಸಕರ ಕಚೇರಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ಮಂಜೂರಾದ 5 ಲ ರೂ. ಪರಿಹಾರಧನ ಚೆಕ್ ವಿತರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಹಿಡಕಲ್ ಜಲಾನಯನ ಮತ್ತು ಪಶ್ಚಿಮಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಟಪ್ರಭಾ ನದಿಗೆ ಪ್ರವಾಹ ಎದುರಾಗಿತ್ತು. ಹಡಗಿನಾಳದ ಮುತ್ತೇಶ್ವರ ದೇವಸ್ಥಾನದ ಬಳಿ ನದಿ ನೀರಿನ ಸೆಳೆತಕ್ಕೆ ಗ್ರಾಮದ ಮುತ್ತೆಪ್ಪ ನಾಯಿಕ ಈಚೆಗೆ ಮೃತಪಟ್ಟಿರುವುದು ನೋವಿನ ವಿಚಾರ. ಕುಟುಂಬಕ್ಕೆ ಸರ್ಕಾರದಿಂದ 5 ಲ ರೂ. ಪರಿಹಾರ ನೀಡಲಾಗುತ್ತಿದೆ. ಈ ಮೊತ್ತವನ್ನು ಕುಟುಂಬಸ್ಥರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗೋಕಾಕ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಮೂಡಲಗಿ ತಹಸೀಲ್ದಾರ್ ಮಹಾದೇವ ಸಣ್ಮುರಿ, ತಾಪಂ ಮಾಜಿ ಸದಸ್ಯ ನಾಗಪ್ಪ ಮಂಗಿ, ಕೌಜಲಗಿ ಕಂದಾಯ ನಿರೀಕ್ಷಕ ಸುಂದರ ಪೂಜೇರಿ, ಗ್ರಾಮ ಆಡಳಿತ ಅಧಿಕಾರಿ ಜಾಹೀರ್ ನದಾಫ್, ವಿಠ್ಠಲ ಆಡಿನ, ಸಿದ್ಧಾರೂಢ ಕಲ್ಲೊಳಿ ಸೇರಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.