ಚಿತ್ರದುರ್ಗ: ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವದರ್ಜೆಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ‘ದೇಖೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ-2024’ ಎಂಬ ಕಾರ‌್ಯಕ್ರಮ ರೂಪಿಸಿದೆ. ಇದರ ಭಾಗವಾಗಿ ನಾಗರಿಕರು, ಆದ್ಯತೆಯೊಂದಿಗೆ ಪ್ರವಾಸಿ ತಾಣಗಳ ಆಯ್ಕೆ ಮಾಡಲು ಸೆ.15 ರವರೆಗೆ ಆನ್‌ಲೈನ್ ಮೂಲಕ ವೋಟ್ ಮಾಡಬಹುದಾಗಿದೆ. ಚಿತ್ರದುರ್ಗದ ಕೋಟೆ, ಉಚ್ಚಂಗಿ ಯಲ್ಲಮ್ಮ ದೇವಸ್ಥಾನ, ಚಂದ್ರವಳ್ಳಿ ಗುಹೆ, ಆಡುಮಲ್ಲೇಶ್ವರ ಮೃಗಾಲಯ, ಜೋಗಿಮಟ್ಟಿ, ವಾಣಿವಿಲಾಸ ಸಾಗರ, ಹಾಲುರಾಮೇಶ್ವರ, ಜಾನಕಲ್, ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಾಲಯ ಸೇರಿ ಜಿಲ್ಲೆಯ ಪ್ರವಾಸಿ ತಾಣಗಳ ಆಯ್ಕೆಗೆ https://innovateindia.mygov.in/dekho-apna-desh ಮೂಲಕ ವೋಟ್ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದ್ದಾರೆ.