ಯಾದಗಿರಿ: ಜಿಲ್ಲೆಯ ಪ್ರವಾಸಿ ತಾಣಗಳ ಇತಿಹಾಸವನ್ನು ರಾಜ್ಯದ ಭೂಪಟದಲ್ಲಿ ಗುರುತಿಸುವ ಕೆಲಸ ಸಕರ್ಾರದಿಂದ ಆಗಬೇಕಿದೆ ಎಂದು ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಮುಖ್ಯಸ್ಥರ ಭಾಸ್ಕರಾವ್ ಮುಡಬೂಳ ಅಭಿಪ್ರಾಯಪಟ್ಟರು.
ನಗರದ ಲುಂಬಿನಿ ವನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ ಹಾಗೂ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ತಮ್ಮ ಕಿರೀಟದಲ್ಲಿ ಧರಿಸುತ್ತಿದ್ದ ವಿಶ್ವವಿಖ್ಯಾತ ಕೋಹಿನೂರ ವಜ್ರ ಸಿಕ್ಕಿದ್ದು ನಮ್ಮ ಜಿಲ್ಲೆಯ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿಯಲ್ಲಿ. ಸುರಪುರ ಶೂರರ ಬೀಡು, ಅಪ್ರತಿಮ ಹೋರಾಟದ ಅಮತಭೂಮಿ. 1857ರ ಪ್ರಥಮ ಸ್ವಾತಂತ್ರೃ ಸಂಗ್ರಾಮ ನಡೆದಾಗ ದಕ್ಷಿಣ ಭಾರತದಲ್ಲಿ ಬ್ರಿಟೀಷರ ವಿರುದ್ಧ ದೊಡೆತಟ್ಟಿ ಏಕೈಕ ಸಂಸ್ಥಾನ ಸುರಪುರದ್ದು. ಬಹರಿ ಬಹದ್ದೂರ್ ರಾಜಾ ನಾಲ್ವಡಿ ವೆಂಕಟಪ್ಪ ನಾಯಕರು ಹೋರಾಟದ ನೇತತ್ವ ವಹಿಸಿದ್ದು ಆವಿಸ್ಮರಣೀಯ. ಇತಿಹಾಸದ ಪುಟಗಳಲ್ಲಿ ಸುರಪುರಕ್ಕೆ ಎಂದೆಂದಿಗೂ ಶಾಶ್ವತವಾದ ಸ್ಥಾನವಿದೆ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ದೇಶ ಸುತ್ತು, ಕೋಶ ಓದು ಎಂಬ ಗಾದೆ ಮಾತಿನಂತೆ ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಪುಸ್ತಕಗಳನ್ನು ಓದುತ್ತ ಹೋದಂತೆ ನಮಗೆ ಅನೇಕ ವಿಷಯಗಳು ಹಾಗೂ ಮಾಹಿತಿಗಳು ಸಹ ದೊರಕುತ್ತದೆ. ಒಂದು ವೇಳೆ ಓದದಿದ್ದರೂ ಪರವಾಗಿಲ್ಲ ದೇಶ ಸುತ್ತಿ ಜ್ಞಾನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.