ಜಿಲ್ಲೆ

ಪ್ರವಾಸಕ್ಕೆ ತೆರಳಿದ್ದ ಕಾಲೇಜ್ ವಿದ್ಯಾರ್ಥಿಗಳ‌ ಬಸ್ ಪಲ್ಟಿ

ಹೊನ್ನಾವರ:ಕಾಲೇಜ್ ವಿದ್ಯಾರ್ಥಿಗಳ ಶೈಕ್ಷಣಿಕ‌ ಪ್ರವಾಸದ ಬಸ್ ಪಲ್ಟಿಯಾಗಿ ಕೆಲ ವಿದ್ಯಾರ್ಥಿಗಳು, ಉಪನ್ಯಾಸಕರು ಗಾಯಗೊಂಡ ಘಟನೆ ಹೊನ್ನಾವರದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಪ್ರಾರ್ಥನಾ ಪದವಿಪೂರ್ವ ಕಾಲೇಜ್ ನ 50 ವಿದ್ಯಾರ್ಥಿಗಳು, 8 ಜನ ಉಪನ್ಯಾಸಕರು, ಇಬ್ಬರು ಆಡಳಿತ ಮಂಡಳಿ ಸದಸ್ಯರು ಸೇರಿ 60. ಜನ‌ ಬಸ್ ನಲ್ಲಿದ್ದರು.
ಜೋಗ ಜಲಪಾತ ನೋಡಿಕೊಂಡು‌ ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಬರುವಾಗ ಸೂಳೆಮುರ್ಕಿ‌ ಕ್ರಾಸ್ ನಲ್ಲಿ ಬುಧವಾರ ತಡರಾತ್ರಿ ಬಸ್ ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 16 ವಿದ್ಯಾರ್ಥಿಗಳು,‌ಇಬ್ಬರು ಉಪನ್ಯಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ‌ ಚಿಕಿತ್ಸೆ ಕೊಡಿಸಲಾಗಿದೆ.
ಉಳಿದವರನ್ನು ಬೇರೆ ಬಸ್ ಮೂಲಕ ಹೊನ್ನಾವರಕ್ಕೆ ತಲುಪಿಸಲಾಗಿದೆ. ಹೊನ್ನಾವರ ಠಾಣೆ ಪೊಲೀಸರು ತಿಳಿಸಿದ್ದಾರೆ.