ಜಿಲ್ಲೆ

ಪ್ರವಚನಕ್ಕಿದೆ ಮನಸ್ಸು ನಿಗ್ರಹಿಸುವ ಶಕ್ತಿ

ಶಹಾಪುರ: ಬೆಳಕಿನ ವೇಗಕ್ಕಿಂತ ಮನಸ್ಸಿನ ವೇಗ ಹೆಚ್ಚಿರುವ ಕಾಲ ಘಟ್ಟದಲ್ಲಿ ಮನಸ್ಸು ನಿಗ್ರಹಿಸುವ ಮಹತ್ವದ ಕಾರ್ಯವನ್ನು ಪುರಾಣ ಪ್ರವಚನಗಳು ಮಾಡುತ್ತವೆ. ಮನಸ್ಸು ನಿಗ್ರಹಿಸುವುದರೊಂದಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವ ಶಕ್ತಿ ಪುರಾಣ-ಪ್ರವಚನಗಳಿಗಿವೆ ಎಂದು ಸಗರ ನಾಗಠಾಣ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯ ನುಡಿದರು.

ಭೀಮರಾಯನ ಗುಡಿಯ ಶಿವಾ ದೇವಾಲಯದಲ್ಲಿ ಹಮ್ಮಿಕೊಂಡಿರುವ ೨೪ನೇ ವರ್ಷದ ಶಿವ ಮಹಾಪುರಾಣಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ೮೪ ಕೋಟಿ ಜೀವರಾಶಿಗಳಲ್ಲಿ ಮನುಷ್ಯ ಬುದ್ಧಿವಂತ. ಅಂಥ ಜನ್ಮ ಪಡೆದ ನಾವೆಲ್ಲರೂ ಜೀವಾತ್ಮ ಬದಲು ಪರಮಾತ್ಮವಾಗಿ ಹೋಗಬೇಕು ಎಂದರು.

ತಾಯಿಯೇ ಮೊದಲು ಗುರು. ಮೂರು ವರ್ಷದ ಬುದ್ಧಿ ನೂರು ವರ್ಷತನಕ. ಕಾರಣ ತಾಯಂದಿರರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು. ಹಿಂದಿನ ಕಾಲದಲ್ಲಿ ಮಗು ಹೊಸ್ತಿಲು ದಾಟಿದರೆ ಮನೆ ಮಂದಿಗೆಲ್ಲ ಸಿಹಿ ನೀಡುತ್ತಿದ್ದರು. ಏಕೆಂದರೆ ಮಗು ಜೀವನದುದ್ದಕ್ಕೂ ಸಿಹಿ ಅನುಭವ ಕಾಣಲಿ ಎಂಬ ಭಾವನೆ ಇತ್ತು. ಆದರೆ ಈಗಿನ ಮಕ್ಕಳು ದುಶ್ಚಟಗಳ ದಾಸರಾಗುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಚರಬಸವೇಶ್ವರ ಸಂಸ್ಥಾನ ಮಠದ ಬಸಯ್ಯ ಶರಣರು ಮಾತನಾಡಿ, ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ, ವಿನಯತೆ ಕಲಿಸಿ. ವೈಭವದ ಜೀವನ ನೀಡಬೇಡಿ ಎಂದು ಹಿತೋಪದೇಶ ನೀಡಿದರು.

ಅಧ್ಯP್ಷÀತೆ ವಹಿಸಿದ್ದ ಕೆಬಿಜೆಎನ್ನೆಲ್ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಪ್ರೇಮಸಿಂಗ್ ಮಾತನಾಡಿ, ನಾವು ಯಾರಿಗೆ ಏನು ಕೊಡುತ್ತೇವೆಯೋ ನಮಗೆ ಅದೇ ದೊರೆಯುತ್ತದೆ. ಹೀಗಾಗಿ ಸರ್ವರಿಗೂ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ ಎಂದರು.

ಪ್ರವಚನಕಾರ ವೇದಮೂರ್ತಿ ಶಂಕರಯ್ಯ ಶಾಸ್ತಿç ಗೊಂದೇನೂರ ಪುರಾಣ ಹೇಳಿದರು. ಶಿವ ದೇವಾಲಯದ ಪ್ರಧಾನ ಅರ್ಚಕ ಶರಣಯ್ಯ ಸ್ವಾಮಿ, ತಿಪ್ಪನಗೌಡ ಅನ್ನದಾನಿ, ಭೀಮರಡ್ಡಿ, ಪ್ರತಾಪರೆಡ್ಡಿ, ಈರಯ್ಯ ಇತರರಿದ್ದರು. ಮಲ್ಲಿಕಾರ್ಜುನ ಪತ್ತಾರ ಪ್ರಾರ್ಥಿಸಿದರು. ಸಿದ್ರಾಮೇಶ್ವರ ನಿರೂಪಣೆ ಮಾಡಿ ವಂದಿಸಿದರು.