ಅರಟಾಳ: ಹಣತೆಯಲ್ಲಿ ದೀಪ ಬೆಳಗಿದಂತೆ ಮನುಷ್ಯನ ಮನಸ್ಸು ಸದಾ ಬೆಳಗಬೇಕು. ಪುರಾಣ, ಪ್ರವಚನ ಕೇಳುವುದರಿಂದ ಪುಣ್ಯ ಸಂಪಾದಿಸಿಕೊಳ್ಳಬಹುದು ಎಂದು ವಿಜಯಪುರದ ಡಾ.ಭೀಮಾಶಂಕರ ಶರಣರು ಹೇಳಿದರು.
ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ `ದಶಾವತಾರ ತೇಜ' ಪ್ರವಚನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಪ್ರವಚನಗಳು ದೇವರ ವಿಚಾರಧಾರೆ ಹಾಗೂ ಮಹಾತ್ಮರ ಜೀವನದ ದಾರಿಯನ್ನು ತಿಳಿಸುತ್ತವೆ. ದ್ವೀಪದಂತೆ ಶಾಂತವಾಗಿ, ತಂಗಾಳಿಯಂತೆ ತಂಪಾಗಿದ್ದರೆ ಮನುಷ್ಯ ದೈವ ಸ್ವರೂಪನಾಗಲು ಸಾಧ್ಯ. ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪರಮಾತ್ಮನ ಹತ್ತು ಅವತಾರಗಳ ಕುರಿತು ತಿಳಿಸಲಾಗುವುದು ಎಂದರು.
ಬಾಡಗಿಯ ಸಂಗಯ್ಯ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ನಿತ್ಯ ದೇವರ ಸ್ಮರಣೆ, ಶಿವ ಧ್ಯಾನ ಮಾಡಬೇಕು. ಮಹಾತ್ಮರ ಆದರ್ಶ ಅಳವಡಿಸಿಕೊಂಡು ಪುಣ್ಯಶಾಲಿಗಳಾಗಬೇಕು. `ದಶಾವತಾರ ತೇಜ' ಪ್ರವಚನ ಕೇಳುವ ಮೂಲಕ ವಿಷ್ಣುವಿನ ಹತ್ತು ಅವತಾರದ ಕುರಿತು ತಿಳಿದುಕೊಳ್ಳಬೇಕು ಎಂದರು.
ಶರಣಯ್ಯ ಸ್ವಾಮೀಜಿ ಮಾತನಾಡಿದರು. ದುಂಡನಗೌಡ ಪಾಟೀಲ, ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಭಂಡಾರಿ, ಗೋಪಾಲ ಬಡಿಗೇರ, ಗಣಪತಿ ಭಂಡಾರಿ, ಸುಭಾಷ ಜಂಬಗಿ, ಬಸವರಾಜ ಭಂಡಾರಿ, ಕಲ್ಲಪ್ಪಗೌಡ ಪಾಟೀಲ, ವಾಸನಗೌಡ ಜಂಬಗಿ, ದಸರತ ಸಿಂಧೂರ, ಶಂಕರ ಮಾಳಿ, ಪ್ರಶಾಂತ ಖ್ಯಾಡಿ, ಭೀಮು ಭಂಡಾರಿ ಇದ್ದರು. ಚನ್ನಬಸು ಬಿರಾದಾರ ನಿರೂಪಿಸಿದರು. ಸದಾನಂದ ಮಾಡಗ್ಯಾಳ ವಂದಿಸಿದರು.