ಚಿತ್ರದುರ್ಗ: ನಗರದ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಪ್ರೈಮರಿ, ಪ್ರೌಢಶಾಲೆಯಲ್ಲಿ ಮಂಗಳವಾರ ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಕುರಿತ ಭಾಷಾ ಪ್ರಯೋಗಾಲಯ ಮಾದರಿ ಪ್ರದರ್ಶನ ನಡೆಯಿತು. ವಿಶೇಷ ವೇಷಭೂಷಣದೊಂದಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗಮನ ಸೆಳೆದರು.