ಜಿಲ್ಲೆ

ಪ್ರಯೋಗಗಳಿಗೆ ತೆರೆದುಕೊಂಡಿದೆ ಬಿಜೆಪಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

ರಾಮನಗರ: ಬಿಜೆಪಿ ಹೊಸ ಪ್ರಯೋಗಗಳಿಗೆ ಹೆಚ್ಚು ತೆರೆದುಕೊಂಡಿದ್ದು, ಈ ನಿಟ್ಟಿನಲ್ಲಿ ಸಕ್ರೀಯವಾಗಿದ್ದೇವೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ರಾಮನಗರದಲ್ಲಿ ಭಾನುವಾರ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜ್ಯದಲ್ಲಿಯೂ ಪಂಜಾಬ್​ ಮಾದರಿ ಸರ್ಕಾರ ತರಲು ಚಿಂತಿಸಲಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನಿಂತ ನೀರಲ್ಲ, ಪ್ರಯೋಗಶೀಲತೆಗೆ ಒತ್ತು ನೀಡುತ್ತದೆ. ಜತೆಗೆ, ಹೊಸಬರಿಗೆ ಆದ್ಯತೆ ನೀಡುತ್ತೇವೆ. ನಿಂತ ನೀರಾದರೆ ಅದು ಮಲಿನವಾಗುತ್ತದೆ. ಹಾಗಾಗಿ ಪ್ರತಿ ಚುನಾವಣೆಯಲ್ಲೂ ಶೇಕಡವಾರು ಎಲ್ಲರಿಗೂ ಅವಕಾಶ ನೀಡುತ್ತೇವೆ. ಇಲ್ಲಿ ಯಾವುದೇ ರ್ನಿದಿಷ್ಟ ೇತ್ರ ಅಂತ ಹೇಳಿಲ್ಲ, ಸಾರ್ವತ್ರಿಕವಾಗಿ ಹೇಳಿದ್ದಾರೆ. ಎಲ್ಲ ರೀತಿಯ ವರದಿ ತೆಗೆದುಕೊಂಡು ಚರ್ಚೆ ಮಾಡಲಾಗುತ್ತದೆ. ಹೀಗಾಗಿ ಪದಲ್ಲಿ ಹೊಸಬರು ಹಾಗೂ ಹಳಬರು ಇಬ್ಬರೂ ಇರುತ್ತಾರೆ ಎಂದು ಹೇಳಿದರು.

ತಹಸೀಲ್ದಾರ್​ ಜಟಾಪಟಿ: ತಹಸೀಲ್ದಾರ್​ ವರ್ಗಾವಣೆ, ಪದ ಬಗ್ಗೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್​ ಬೇಸರದ ವಿಚಾರಕ್ಕೆ ಪ್ರತಿಕ್ರಿಯಿಸಿದ ರವಿ, ಚನ್ನಪಟ್ಟಣಕ್ಕೆ ಬಂದಾಗ ನನ್ನ ಗಮನಕ್ಕೆ ತಂದಿದ್ದಾರೆ. ತಹಸೀಲ್ದಾರ್​ ವರ್ಗಾವಣೆ ವಿಚಾರವಾಗಿ ಸಿಎಂ ಹಾಗೂ ಯೋಗೇಶ್ವರ್​ ಜತೆ ಮಾತನಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಮಾಜಿ ಸಿಎಂ ಹಾಗೂ ಚನ್ನಪಟ್ಟಣ ೇತ್ರದ ಶಾಸಕ ಕುಮಾರಸ್ವಾಮಿ ಮಾತು ನಡೆಯುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್​ ಮಾತಿಗೆ ನಾನು ಕಾಮೆಂಟ್​ ಮಾಡಲ್ಲ. ವರ್ಗಾವಣೆ ಬಗ್ಗೆ ಕಂದಾಯ ಸಚಿವ ಹಾಗೂ ಯೋಗೇಶ್ವರ್​ ಜತೆ ಚರ್ಚೆ ಮಾಡುತ್ತೇನೆ ಎಂದರು.

ಬಿಜೆಪಿ ಅಧಿ-ಕಾರದಲ್ಲಿರುವಾಗ ಕಾರ್ಯಕರ್ತರು ಆಸಹಾಯಕರಾಗಬೇಕಿಲ್ಲ, ಅವರಿಗೆ ಬಲ ತುಂಬುವ ಕೆಲಸ ಮಾಡುತ್ತೇನೆ. ಈಗಾಗಲೇ ರಾಮನಗರ ಸಂಟನೆ ಬಗ್ಗೆ ಮಾಹಿತಿ ಬಂದಿದೆ. ರಾಮನಗರದಲ್ಲಿ ಮನೆಯೂ ಒಂದೇ ಮನಸ್ಸು ಒಂದೇ ಎಂದು ಹೇಳಿದರು.