ನಂದಿಬಟ್ಟಲು ಗ್ರಾಮಪಂ ಎನ್.ಬಿ.ಕಾಲೋನಿ ಗ್ರಾಮದ ಪ್ರಯಾಣಿಕರ ತಂಗುದಾಣ ಶಿಥಿಲಗೊಂಡಿರುವುದು. 
ಜಿಲ್ಲೆ

ಪ್ರಯಾಣಿಕರ ತಂಗುದಾಣ ಶಿಥಿಲ

ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ಬಿ.ಕಾಲೋನಿ ಗ್ರಾಮದಲ್ಲಿ ತಂಗುದಾಣ ಶಿಥಿಲಗೊಂಡಿದೆ.

ತಂಗುದಾಣ ಹಳೆಯದಾಗಿರುವುದರಿಂದ ಶಿಥಿಲಗೊಂಡಿದ್ದು, ಪ್ರಯಾಣಿಕರು ತಂಗುದಾಣದೊಳಗೆ ಹೋಗುತ್ತಿಲ್ಲ. ಹೀಗಾಗಿ ತಂಗುದಾಣದ ಮುಂಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವವರು ಫ್ಲೆಕ್ಸ್‌ಗಳನ್ನು ಅಳವಡಿಸುತ್ತಿದ್ದಾರೆ.

ಪ್ರಯಾಣಿಕರ ತಂಗುದಾಣಕ್ಕೆ ಸಾರ್ವಜನಿಕರು ಬಾರದೆ ಇರುವುದರಿಂದ ಕೆಲವರು ಸ್ಥಳವನ್ನು ಮದ್ಯಪಾನದಂಥ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ನಂದಿಬಟ್ಟಲು ಗ್ರಾಮ ಪಂಚಾಯಿತಿ ಪ್ರಯಾಣಿಕರ ತಂಗುದಾಣವನ್ನು ನೆಲಸಮಗೊಳಿಸಿ ಹೊಸದಾಗಿ ತಂಗುದಾಣ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ನಂದಿಬಟ್ಟಲು ಕಾಲನಿ ಗ್ರಾಮದ ಕಷ್ಣಪ್ಪ ಹೇಳಿದ್ದಾರೆ.