ಕೆ.ಆರ್.ಸಾಗರ: ಕೆ.ಆರ್.ಸಾಗರದ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಸೆಂಜರ್ ಆಟೋ ಮಾಲೀಕರು ಮತ್ತು ಚಾಲಕರ ಸಭೆಯನ್ನು ಬುಧವಾರ ಠಾಣೆ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಠಾಣೆಯ ವೃತ್ತ ನಿರೀಕ್ಷಕ ಪುನೀತ್ ಮಾತನಾಡಿ, ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಡಿಎಲ್, ಇನ್ಶೂರೆನ್ಸ್ ಹೊಂದಿರಬೇಕು, ಸರ್ಕಾರದ ಮಾನದಂಡದಂತೆ ಪ್ರಯಾಣಿಕರನ್ನು ಕೂರಿಸಬೇಕು, ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸುವುದು, ಹೆಚ್ಚಿನ ಹಣ ನಿಡುವಂತೆ ಪೀಡಿಸುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದುಕೊಳ್ಳುವುದು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ಅಥವಾ ಸಿಬ್ಬಂದಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಪಿಎಸ್ಸೈ ಬಸವರಾಜು, ಪೊಲೀಸ್ ಸಿಬ್ಬಂದಿ, ಆಟೋ ಮಾಲೀಕರು ಹಾಗೂ ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.