ಬಾಗಲಕೋಟೆ: ಗ್ರಾಮ ಆಡಳಿತ ಅಽಕಾರಿಗಳಿಗೆ ಸುಸಜ್ಜಿತವಾದ ಕಚೇರಿ ನೀಡುವುದು, ಗ್ರಾಮ ಆಡಳಿತ ಅಽಕಾರಿಗಳ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸುವುದು, ವರ್ಗಾವಣೆಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಽಕಾರಿಗಳ ತಾಲೂಕಾ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟವಾಽ ಮುಷ್ಕರ ಆರಂಭಿಸಲಾಗಿದೆ.
ಬಾಗಲಕೋಟೆ ನಗರದ ತಹಸೀಲ್ದಾರ ಕಚೇರಿ ಎದುರು ಸೋಮವಾರದಿಂದ ಆರಂಭಗೊAಡ ಮುಷ್ಕರದಲ್ಲಿ ನೌಕರರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಟೆಂಟ್ ಹಾಕಿಕೊಂಡು ಧರಣಿ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಸಂಘದ ಬಾಗಲಕೋಟೆ ತಾಲೂಕಾ ಅಧ್ಯಕ್ಷ ಸಂಗಮೇಶ ಮುಗಳೊಳ್ಳಿ, ಕ್ಷೇತ್ರಮಟ್ಟದ ಗ್ರಾಮ ಆಡಳಿತ ಅಽಕಾರಿಗಳನ್ನು ಕಚೇರಿಗಳಿಗೆ ನಿಯೋಜಿಸಿಕೊಂಡಿರುವ ಪ್ರಕರಣಗಳಲ್ಲಿ ಅವರುಗಳ ಮೂಲ ಹುದ್ದೆಗಳಿಗೆ ಬಿಡುಗಡೆಗೊಳಿಸಲು ಸರ್ಕಾರವು ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆ ನಂತರವೂ ಸಹ ಕ್ಷೇತ್ರ ಮಟ್ಟದ ಗ್ರಾಮ ಆಡಳಿತ ಅಽಕಾರಿಗಳನ್ನು ಕಚೇರಿ ನಿಯೋಜನೆಯಿಂದ ಬಿಡುಗಡೆಗೊಳಿಸದೇ ಇರುವ ಪ್ರಕರಣಗಳಲ್ಲಿ ಸಂಬAಽಸಿದವರ ವಿರುದ್ಧ ಸರ್ಕಾರದ ಸುತ್ತೋಲೆಯಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವೃಂದ ಮತ್ತು ನೇಮಕಾತಿ ತಿದ್ದುಪಡಿಯನ್ನು ಯಥಾವತ್ತಾಗಿ ಸಮರ್ಥಿಸಿಕೊಳ್ಳಬೇಕು. ಅನುಕಂಪದ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಬೇಕು. ಕಳೆದ ನಾಲ್ಕು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗೆ ಸಂಬAಽಸಿದAತೆ ಕೆ.ಸಿ.ಎಸ್.ಆರ್ ನಿಯಮ ೧೬ಎ ರ ಉಪಖಂಡ(೨)ವನ್ನು ಹಿಂಪಡೆದಿರುವುದರಿAದ ನೌಕರರ ಜೀವನದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಿದೆ. ಎಲ್ಲಾ ಇಲಾಖೆಗಳಂತೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುವವರ ವರ್ಗಾವಣೆಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಉಪಾಧ್ಯಕ್ಷ ವಿಜಯಕುಮಾರ ದೇಶಮಾನೆ, ಪ್ರ.ಕಾರ್ಯದರ್ಶಿ ರವಿಕುಮಾರ ಕುಳ್ಳೊಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಆಡಳಿತಾಽಕಾರಿಗಳು ಭಾಗವಹಿಸಿದ್ದರು.