ಜಿಲ್ಲೆ

ಪ್ರಮುಖ ಸ್ಥಳಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಣೆ

ಸವಣೂರ: ಕಂದಾಯ ಇಲಾಖೆ, ಪುರಸಭೆ ಹಾಗೂ ಅಗ್ನಿಶಾಮಕ ದಳದ ಸಹಯೋಗದಲ್ಲಿ ಪಟ್ಟಣದಲ್ಲಿ ಶನಿವಾರ ಹೈಪೋ ಕ್ಲೋರೈಡ್ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಯಿತು.

ಕರೊನಾ ವೈರಸ್, ಸಾಂಕ್ರಾಮಿಕ ರೋಗ ಹತೋಟಿಗಾಗಿ ಸರ್ಕಾರದ ಆದೇಶದ ಮೇರೆಗೆ ಪುರಸಭೆ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಪಟ್ಟಣದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದಿಂದ ಡಾ.ವಿ.ಕೃ. ಗೋಕಾಕ ವೃತ್ತ, ತಾಲೂಕು ಸಾರ್ವಜನಿಕ ಆಸ್ಪತ್ರೆ ರಸ್ತೆ, ಸಿಂಪಿಗಲ್ಲಿ, ಮಾರುಕಟ್ಟೆ, ಭರಮಲಿಂಗೇಶ್ವರ ವೃತ್ತ, ಶುಕ್ರವಾರ ಪೇಟೆ ಸೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಿದರು.

ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ಕಟ್ಟಿಮನಿ, ಪುರಸಭೆ ಸದಸ್ಯರಾದ ಸದಾನಂದ ಕೆಮ್ಮಣಕೇರಿ, ಅದ್ದು ಪರಾಶ, ಅಗ್ನಿಶಾಮಕ ದಳದ ಪ್ರಭಾರ ಅಧಿಕಾರಿ ಎಂ.ಎಂ. ಮೇಟಿ, ಸಿಬ್ಬಂದಿ ಬಸವರಾಜ ಆರೇರ, ಬಸಪ್ಪ ಯತ್ನಳ್ಳಿ, ನಿಂಗಪ್ಪ ಕಾನನವರ, ಪುರಸಭೆ ಸಿಬ್ಬಂದಿ, ಪೌರ ಕಾರ್ವಿುಕರು ಇತರರು ಇದ್ದರು.